ಸುರಪುರದಲ್ಲಿ 84ನೇ ನಾಡಹಬ್ಬದ ಅಂಗವಾಗಿ ನಾಡದೇವಿಯ ಭವ್ಯ ಮೆರವಣಿಗೆ
ಸುರಪುರ: ಪಟ್ಟಣದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘದ ವತಿಯಿಂದ ಹಮ್ಮಿಕೊಂಡಿರುವ 84ನೇ ನಾಡಹಬ್ಬದ ಆಚರಣೆಯ ಅಂಗವಾಗಿ ನಾಡದೇವಿಯ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಲಾಯಿತು.
ತೆರೆದ ವಾಹನದಲ್ಲಿ ನಾಡದೇವಿಯ ಭಾವಚಿತ್ರವನ್ನು ಅಲಂಕರಿಸಿ, ವಾದ್ಯಮೇಳದೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕನ್ನಡದ ಜಯಘೋಷಗಳನ್ನು ಮೊಳಗಿಸುತ್ತಾ ಸಾಗಿದ ಮೆರವಣಿಗೆ ಮರಳಿ ಕನ್ನಡ ಸಾಹಿತ್ಯ ಸಂಘದ ಭವನವನ್ನು ತಲುಪಿತು.
ಸುರಪುರ ಅರಸು ವಂಶಸ್ಥರಾದ ರಾಜಾ ಕೃಷ್ಣಪ್ಪ ನಾಯಕ ಹಾಗೂ ರಾಜಾ ಹರ್ಷವರ್ಧನ ನಾಯಕ ಅವರು ಕನ್ನಡದ ಧ್ವಜವನ್ನು ಬೀಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ಸಂಘದ ಅಧ್ಯಕ್ಷ ಸೂಗೂರೇಶ ವಾರದ, ಮಾಜಿ ಅಧ್ಯಕ್ಷ ಡಾ. ಸುರೇಶ ಸಜ್ಜನ್, ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಗೋವಿಂದರಾಜ ಶಹಾಪುರಕರ್, ಸಂಘದ ಉಪಾಧ್ಯಕ್ಷ ಸೋಮರಾಯ ಶಖಾಪುರ, ಯಂಕಣ್ಣ ಗದ್ವಾಲ, ಶರಣಗೌಡ ಮಾ. ಪಾಟೀಲ, ಶ್ರೀರಂಗ ಮಿರಿಯಾಲ, ಶ್ರೀನಿವಾಸ ಜಾಲವಾದಿ, ಸಿದ್ದಯ್ಯ ಮಠ, ಯಜ್ಞೇಶ್ವರ ಭಟ್ ರಾಜಜೋಶಿ, ಪ್ರಕಾಶ ಅಲಬನೂರ, ಮೌನೇಶ ನಾಲವಾರ, ಶಿವರಾಜಪ್ಪ ಗೋಲಗೇರಿ, ಅಮರೇಶ ಕುಂಬಾರ, ಹರೀಶ ತ್ರಿವೇದಿ, ಪ್ರಕಾಶ ಬಣಗಾರ, ದಿಲೀಪ್ ಯಾದವ್, ಸಾಹೇಬ ಗೌಡ ಕುಂಬಾರ ಹಾಗೂ ಮರೆಪ್ಪ ತೇಲ್ಕರ್ ಸೇರಿದಂತೆ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು.