ಹುಣಸಗಿ | ಜಿಲ್ಲಾ ಜೂನಿಯರ್ ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆ
ಹುಣಸಗಿ: ಬಿಹಾರದ ಪಾಟಲಿಪುತ್ರ ಕ್ರೀಡಾ ಸಂಕೀರ್ಣದಲ್ಲಿ ನವೆಂಬರ್ 2ರಿಂದ 4ರವರೆಗೆ ನಡೆಯಲಿರುವ 52ನೇ ಜೂನಿಯರ್ ಬಾಲಕರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿರುವ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆಯ ಅಂಗವಾಗಿ, ಯಾದಗಿರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ (ರಿ.) ವತಿಯಿಂದ ಹುಣಸಗಿ ಪಟ್ಟಣದ ಸರ್ಕಾರಿ ಪಿಯು ಬಾಲಕರ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಜೂನಿಯರ್ ಬಾಲಕರ ಕಬಡ್ಡಿ ಆಟಗಾರರ ಆಯ್ಕೆ ಪ್ರಕ್ರಿಯೆ ನಡೆಯಿತು.
ಆಯ್ಕೆ ಪ್ರಕ್ರಿಯೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾರು 52 ಜೂನಿಯರ್ ಕಬಡ್ಡಿ ಆಟಗಾರರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ನಿಂಗಣ್ಣ ಚೌಹಾಣ್, ನಾಗನಗೌಡ ಪಾಟೀಲ್, ಬೈಲಪ್ಪ, ದೇವಪ್ಪ ಕಡದರಾಳ, ಬಸವರಾಜ ಗುತ್ತೇದಾರ್, ಭೀಮಣ್ಣ ಚೈನಿ ಹಾಗೂ ಅಲಿಬಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.