ಯಾದಗಿರಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಗೆ ನೂತನ ಪದಾಧಿಕಾರಿಗಳ ನೇಮಕ
ಯಾದಗಿರಿ: ಜಿಲ್ಲಾ ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿಯ ಜಿಲ್ಲಾ ಜಂಟಿ ಸಂಯೋಜಕರಾಗಿ ಸೌರಾಷ್ಟ್ರಹಳ್ಳಿ ಗ್ರಾಮದ ಹಣಮಂತ ತಂದೆ ಭೀಮಪ್ಪ ದೊಡ್ಡಮನಿ ಹಾಗೂ ಜಿಲ್ಲಾ ಪ್ರಚಾರ ಸಮಿತಿಯ ಸಂಯೋಜಕರಾಗಿ ಮಲ್ಲಯ್ಯ ಕಸವಿ ಅವರನ್ನು ನೇಮಕ ಮಾಡಲಾಗಿದೆ.
ಜಿಲ್ಲಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಮರೆಪ್ಪ ಕವಡಿ ಬಿಲ್ಹಾರ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಅಧ್ಯಕ್ಷ ಸಾಯಬಣ್ಣ ಕೆಂಗುರಿ ಅವರ ನೇತೃತ್ವದಲ್ಲಿ, ಬಸರೆಡ್ಡಿ ಪಾಟೀಲ್ ಅನಪೂರ್ ಅವರ ಶಿಫಾರಸ್ಸಿನ ಮೇರೆಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ರಾಜ್ಯಾಧ್ಯಕ್ಷ ವಿನಯ ಕುಮಾರ ಸೊರಕೆ ಅವರ ಆದೇಶದಂತೆ ಈ ನೇಮಕ ನಡೆದಿದೆ.
ನೂತನ ಪದಾಧಿಕಾರಿಗಳು ಪಕ್ಷದ ಸಿದ್ಧಾಂತಗಳು, ಸರ್ಕಾರದ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತಷ್ಟು ಸಂಘಟಿಸಿ ಬಲಪಡಿಸುವಲ್ಲಿ ಯಶಸ್ವಿಯಾಗಲಿ ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಯಾದಗಿರಿ ನಗರ ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೇ, ರಾಜ್ಯ ಸಂಘಟನಾ ಸದಸ್ಯ ರಾಘವೇಂದ್ರ ಮಾನಸಗಲ್, ತಾಲೂಕು ಒಬಿಸಿ ಅಧ್ಯಕ್ಷ ಸಾಯಬಣ್ಣ ಬಾಡಿಯಾಳ, ಸೈದಾಪುರ ಒಬಿಸಿ ಬ್ಲಾಕ್ ಅಧ್ಯಕ್ಷ ದೇವಪ್ಪಗೌಡ ರಾಚನಹಳ್ಳಿ, ಜಗದೀಶ್ ಅಬ್ಬೆತುಮಕೂರು, ಜಗದೀಶ್ ಸಜ್ಜನ್ (ಸೌರಾಷ್ಟ್ರಹಳ್ಳಿ), ಹಣಮಂತರಾಯ ತೆಕಾರಾಳ, ಭೀಮರಾಯ ದಾಸರಿ, ವೀರೇಶ್ ಸಜ್ಜನ್, ಬಸಲಿಂಗಪ್ಪ ಗೋಲ್ಡ್, ಭಾಸ್ಕರ್ ಬಡಿಗೇರ, ಸೋಮಶೇಖರ್ ಮಸಕನಳ್ಳಿ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.