ಯಾದಗಿರಿ | ಜಿಲ್ಲಾ ಮಟ್ಟದ ಎಸ್‌ಸಿ, ಎಸ್‌ಟಿ ಕುಂದು ಕೊರತೆ ಸಭೆ
ಸುರಪುರ: ಕಾನೂನು ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ನೀಡಿದ್ದು, ಯಾರು ಕೂಡ ಈ ಹಕ್ಕುಗಳನ್ನು ಉಲ್ಲಂಘಿಸಬಾರದು ಎಂದು ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದರು.
ತಾಲೂಕಿನ ಪೇಠ ಅಮ್ಮಾಪುರ ಗ್ರಾಮದಲ್ಲಿ ಯಾದಗಿರಿ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಕುಂದು ಕೊರತೆಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪೃಥ್ವಿಕ್ ಶಂಕರ್, ಎಲ್ಲಿಯಾದರೂ ಜಾತಿ ತಾರತಮ್ಯ ಅಸ್ಪೃಶ್ಯತೆ ಕಂಡು ಬಂದಲ್ಲಿ ನಮ್ಮ ಇಲಾಖೆಗೆ ಮಾಹಿತಿಯನ್ನು ನೀಡಿದರೆ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವರ್ಗ ಭೇದ, ಲಿಂಗ ಬೇಧ, ಜಾತಿ ತಾರತಮ್ಯ, ಧರ್ಮ ತಾರತಮ್ಯ ಯಾರೂ ಕೂಡ ಮಾಡಬಾರದು. ಎಲ್ಲರಿಗೂ ಕಾನೂನು ರಕ್ಷಣೆ ನೀಡುತ್ತಿದ್ದು ಅಸ್ಪೃಶ್ಯತೆ ಆಚರಣೆಯನ್ನು ತೊಲಗಿಸಲು ಎಲ್ಲರೂ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಡಿವೈಎಸ್‌ಪಿ ಜಾವೇದ್ ಇನಾಂದಾರ್ ಮಾತನಾಡಿ, ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಯಾವುದೇ ರೀತಿಯ ಅಸ್ಪೃಶ್ಯತೆ, ಜಾತಿನಿಂದನೆ ಘಟನೆಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆ ತಕ್ಷಣ ನಿಮ್ಮ ನೆರವಿಗೆ ಬರಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಸಮಿತಿಯ ನಾಮ ನಿರ್ದೇಶಿತ ಸದಸ್ಯ ಮರೆಪ್ಪ ಚಟ್ಟೆರಕರ್, ಹೊರಟಗಾರ ಭೀಮಶಂಕರ್ ಬಿಲ್ಲವ್, ಶಿವರಾಜ ನಾಯಕ, ಶಿವಲಿಂಗ ಹಸನಾಪುರ, ನಿಂಗಣ್ಣ ಗೋನಾಲ, ದಾನಪ್ಪ ಕಡಿಮನಿ ಇತರರು ಮಾತನಾಡಿದರು.
ವೇದಿಕೆಯಲ್ಲಿ ತಹಸಿಲ್ದಾರ್ ಹುಸೇನ ಸಾಬ್ ಎ ಸರಕಾವಸ್, ತಾಲೂಕು ಪಂಚಾಯಿತಿ ಇ ಓ ಬಸವರಾಜ ಸಜ್ಜನ್, ಸಮಾಜ ಕಲ್ಯಾಣ ಇಲಾಖೆ ಎ ಡಿ ಮಹಮ್ಮದ್ ಸಲೀಂ, ಸಿಡಿಪಿಓ ಲಾಲಸಾಬ್ ಪೀರಾಪುರ ಮಾತನಾಡಿದರು.
ಯಾದಗಿರಿ ಡಿಸಿಆರ್ ಸರ್ಕಲ್ ಇನ್ಸ್ಪೆಕ್ಟರ್, ಪಿಡಿಓ ಶಿವಕುಮಾರ್, ವೈದ್ಯಾಧಿಕಾರಿ ಎಮ್.ಎಮ್.ರಾಹಿಲ್ ವೇದಿಕೆಯಲ್ಲಿದ್ದರು. ಪಿ.ಐ ಉಮೇಶ್ ನಾಯಕ್ ಎಲ್ಲರನ್ನು ಸ್ವಾಗತಿಸಿ ವಂದಿಸಿದರು.
ಪಿಎಸ್ಐ ಸಿದ್ದಣ್ಣ ಯಡ್ರಾಮಿ, ಗ್ರಾಮದ ಮುಖಂಡರಾದ ಮಹೇಶ ವಿ.ಯಾದವ್, ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ, ತಿಪ್ಪಣ್ಣ ಶೆಳ್ಳಗಿ, ತಿರುಪತಿ ಟಣಕೆದಾರ್, ವೆಂಕಟೇಶ ದೇವಾಪುರ, ಮಲ್ಕಪ್ಪ ವಾಗಣಗೇರಾ, ಭೀಮಣ್ಣ, ಸುಭಾಷ್ ಗುತ್ತೇದಾರ, ಹಣಮಂತ್ರಾಯ ಹೊಸಮನಿ ಸೇರಿದಂತೆ ವಿವಿಧ ಗ್ರಾಮಗಳ ಜನರು ಭಾಗವಹಿಸಿದ್ದರು.