×
Ad

ದೇರಳಕಟ್ಟೆ : ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯಲ್ಲಿ 19ನೇ ಇಎನ್‌ಟಿ ಕಾರ್ಯಾಗಾರ

ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮ-2026 ಉದ್ಘಾಟನೆ

Update: 2026-01-31 13:56 IST

ಮಂಗಳೂರು: ನಿಟ್ಟೆ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಗೆ ಸೇರಿದ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಕಿವಿ–ಮೂಗು–ಗಂಟಲು (ಇಎನ್‌ಟಿ) ರೋಗ ವಿಭಾಗದ ವತಿಯಿಂದ ಆಯೋಜಿಸಲಾದ “19ನೇ ಕಾರ್ಯಾಗಾರ ಹಾಗೂ ಸ್ನಾತಕೋತ್ತರ ಶಿಕ್ಷಣ ಕಾರ್ಯಕ್ರಮ–2026” ರ ಉದ್ಘಾಟನಾ ಸಮಾರಂಭವು ಜ.30 ಶುಕ್ರವಾರ ಬೆಳಿಗ್ಗೆ ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಚಿಂತನಾ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯೆನೆಪೊಯಾ (ಡೀಮ್ಡ್ ಟು ಬಿ ಯೂನಿವರ್ಸಿಟಿ)ಯ ಕುಲಪತಿ ಪ್ರೊ. ಡಾ. ಗಂಗಾಧರ ಸೋಮಯಾಜಿ ಅವರು ಭಾಗವಹಿಸಿದ್ದರು. ಅಧ್ಯಕ್ಷತೆಯನ್ನು ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಪ್ರೊ. ಡಾ. ಎಂ.ಎಸ್. ಮೂಡಿತಾಯ ಅವರು ವಹಿಸಿದ್ದರು.

ಈ ಸಂದರ್ಭದಲ್ಲಿ ಕೆ.ಎಸ್. ಹೆಗ್ಡೆ ವೈದ್ಯಕೀಯ ಅಕಾಡೆಮಿಯ ಡೀನ್ ಪ್ರೊ. (ಡಾ.) ಬಿ. ಸಂದೀಪ್ ರೈ ಹಾಗೂ ನಿಟ್ಟೆ (ISR & CRL) ಉಪಾಧ್ಯಕ್ಷ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಿವಿ–ಮೂಗು–ಗಂಟಲು ರೋಗ ವಿಭಾಗದ ಮುಖ್ಯಸ್ಥರಾದ ಪ್ರೊ. (ಡಾ.) ವಾದಿಶ್ ಭಟ್ ಅವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದು, ಆಯೋಜನಾ ಅಧ್ಯಕ್ಷರಾಗಿ ಪ್ರೊ. (ಡಾ.) ಶ್ರೀನಾಥ ಕಾಮತ್ ಹಾಗೂ ಆಯೋಜನಾ ಕಾರ್ಯದರ್ಶಿಯಾಗಿ ಡಾ. ಗೌತಮ್ ಎಂ.ಕೆ. ಕಾರ್ಯನಿರ್ವಹಿಸಿದರು.

ಈ ಕಾರ್ಯಾಗಾರವು ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ಸ್ನಾತಕೋತ್ತರ ವೈದ್ಯರಿಗೆ OSCE ಪದ್ಧತಿಯ ತರಬೇತಿ ನೀಡುವ ಮೂಲಕ ಅವರ ಕ್ಲಿನಿಕಲ್ ಜ್ಞಾನ ಹಾಗೂ ಕೌಶಲ್ಯ ವೃದ್ಧಿಗೆ ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಹಿರಿಯ ಇಎನ್‌ಟಿ ಶಿಕ್ಷಕರಾದ ಡಾ. ಅಝೀಮ ಮೊಹಿಯುದ್ದೀನ್ ಮತ್ತು ಡಾ. ಬಾಲಕೃಷ್ಣನ್ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಡಾ. ನೀಮ ಮತ್ತು ಡಾ. ಮೆರಿಲ್ ನಿರ್ವಹಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News