ಪಾಟ್ರಕೋಡಿ : ಸರಕಾರಿ ಶಾಲೆಗೆ ಸೌಂಡ್ ಬಾಕ್ಸ್, ಮೈಕ್ ಕೊಡುಗೆ
Update: 2026-01-31 14:03 IST
ವಿಟ್ಲ : ಪಾಟ್ರಕೋಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರಾಜೀವ್ ಗಾಂಧಿ ಜ್ಯೋತಿ ಯಾತ್ರಾ ಸಮಿತಿಯ ರಾಜ್ಯ ಉಪಾಧ್ಯಕ್ಷ, ಸುರಕ್ಷಾ ಕನ್ಸ್ಟ್ರಕ್ಷನ್ ನ ಮಾಲಕ ಸಿದ್ದಿಕ್ ಸೂರ್ಯ ಅವರು ಕೋಡ್‌ಲೆಸ್ ಸೌಂಡ್ ಬಾಕ್ಸ್ ಹಾಗೂ ಮೈಕ್ ಅನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಉದ್ಯಮಿ ಮನ್ಸೂರ್ ನೇರಳಕಟ್ಟೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ರಝಕ್, ಸದಸ್ಯರಾದ ಅಬ್ದುಲ್ ಶರೀಫ್, ಅಬ್ದುಲ್ ಗಫೂರ್, ಮನ್ಸೂರ್, ಜುಬೇರ್ ಟಿ, ಶಾಲೆಯ ಹಿರಿಯ ಶಿಕ್ಷಕಿ ಜಯಲಕ್ಷ್ಮಿ, ಸಹ ಶಿಕ್ಷಕರಾದ ಸುಮಯ್ಯ, ಮಮತಾ, ಗುರುರಾಜ ಉಪಸ್ಥಿತರಿದ್ದರು.