×
Ad

ಕ್ರಿಸ್ಮಸ್-ಗಾಝಾ ಪಟ್ಟಿ

Update: 2024-01-06 11:06 IST

ಕ್ರಿಸ್ತ ಮುಹಮ್ಮದ ಬುದ್ಧರು

ಹಬ್ಬಕ್ಕೆ ಬಂದವರು

ಬೆಬ್ಬಳಿಸಿ ನಿಂದಿಹರು

ಗಾಝಾದ ಉರಿಯುವ

ನೆಲದೊಡಲಿನಿಂದ

ಮಕ್ಕಳ ತಾಯಂದಿರ

ಆಕ್ರಂದನ ಒಂದೇ ಸಮ

ಕರುಣೆ ಸತ್ತ ಜಗದೆದುರು

ಭೋರ್ಗರೆದಿದೆ ಅಳಲು

ಮೋಡದೊಡಲ ಮಳೆಯಾಗಿ

ಗುಡುಗು ಮಿಂಚು ಸಿಡಿಲಾಗಿ

ಹೆತ್ತೊಡಲಿಗೆ ಉರಿಗಿಚ್ಚನಿಕ್ಕಿ

ಚಳಿಕಾಯಿಸೊ ಜಗಭಂಡರೇ

ದ್ವೇಷಾಗ್ನಿಯ ಯಾಜ್ಞವಲ್ಕ್ಯರೇ

ಸಾಕು ನಿಮ್ಮ ಅಶ್ವಮೇಧ.

ವಿಶ್ವಮಕ್ಕಳ ದಿನಾಚರಣೆ

ಕ್ರಿಸ್ಮಸ್ ಹಬ್ಬದಾಚರಣೆ

ಯಾವ ನರಕದ ಸೀಕರಣೆ?

ಯಾ ಉಗಾದಿಯ ಪಾರಣೆ?

ಗಾಝಾದ ಅಳಲು ಕೂಗಿದೆ

ಜಗದ ಜನ ಮನಕೆ ಮೊರೆದಿದೆ

ನಿಮ್ಮ ಮನೆಯ ಒಲೆಗಳಲ್ಲಿ

ನಮ್ಮ ಚಿತೆಯ ಉರಿವಕೊಳ್ಳಿ

ನೀವು ತಿನ್ನುವ ಅನ್ನ

ನಮ್ಮ ದೇಹದ ಬನ್ನ

ನಿಮ್ಮ ನಗುವ ನಾಕಕೆ

ನಮ್ಮ ಹೊಗೆಯ ಸೂತಕ.

 

 

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News

ಭಾವ - ವಿಕಲ್ಪ

ಕಥೆಗಾರ