ಕಣಚೂರು: ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರ ಉದ್ಘಾಟನೆ
ಕೊಣಾಜೆ: ದೇರಳಕಟ್ಟೆ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ, ಕರ್ನಾಟಕ ಚಾಪ್ಟರ್ ಆಫ್ ಅಬ್ಸ್ಟೆಟ್ರಿಕ್ಸ್ ಆಂಡ್ ಗೈನಕಾಲಜಿ ಮತ್ತು ಅಬ್ಸ್ಟೆಟ್ರಿಕ್ಸ್ ಅಂಡ್ ಗೈನಕಾಲಜಿಕಲ್ ಸೊಸೈಟಿ ಇದರ ಸಹಯೋಗದೊಂದಿಗೆ 'ಫ್ಯೂಚರ್ ಇನ್ ಫೋಕಸ್ : ಜೆನೆಟಿಕ್ಸ್ ಆಂಡ್ ರೀಜನರೇಟಿವ್ ಥೆರಪೀಸ್ ರೆಡಿಫೈನ್ಡ್' ಎಂಬ ವಿಷಯದ ಕುರಿತು ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಾಗಾರವು ದೇರಳಕಟ್ಟೆಯ ಕಣಚೂರು ಆಸ್ಪತ್ರೆಯ ಕಾನ್ಪರೆನ್ಸ್ ಸಭಾಂಗಣದಲ್ಲಿ ನಡೆಯಿತು.
ಕಣಚೂರು ಹೆಲ್ತ್ ಸೈನ್ಸಸ್ ಸಲಹಾ ಮಂಡಳಿ ಅಧ್ಯಕ್ಷ ಡಾ.ಎಂ.ಇಸ್ಮಾಯೀಲ್ ಹೆಜಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಡೀನ್ ಡಾ.ಶಾನವಾಝ್ ಮನ್ನಿಪಾಡಿ ಉಪಸ್ಥಿತರಿದ್ದರು.
'ಒಬಿಜೆವೈಎನ್ ಅಭ್ಯಾಸದಲ್ಲಿ ಜೆನೆಟಿಕ್ಸ್ ಮೂಲತತ್ವಗಳು' ಎಂಬ ವಿಷಯದಲ್ಲಿ ಡಾ.ದೀಪಾ ಭಟ್, 'ಪಿಜಿಡಿ – ಹೊಸದು ಏನು?' ಎಂಬ ವಿಷಯದಲ್ಲಿ ಡಾ.ಫಿಯೋನಾ ಡಿಸೋಜ, 'ಗೈನಕಾಲಜಿಕಲ್ ಅಭ್ಯಾಸದಲ್ಲಿ ಪುನರುತ್ಪಾದನೆ ಚಿಕಿತ್ಸೆಯ ಅನ್ವಯ' ಎಂಬ ವಿಷಯದ ಬಗ್ಗೆ ಡಾ.ಯೋಗಿತಾ ರಾವ್ ಮಾತನಾಡಿದರು.
ವೈದ್ಯರಾದ ಡಾ.ಫಿಯೋನಾ ಡಿಸೋಜ ಮತ್ತು ಡಾ.ಸೋನಿಯಾ ಅಧ್ಯಕ್ಷತೆಯಲ್ಲಿ ಜೆನಿಟಕ್ಸ್ ನ ನವೀನ ಕ್ಲಿನಿಕಲ್ ವಿಧಾನಗಳ ಕುರಿತು ಚರ್ಚಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು, ಸದಸ್ಯರು ಮತ್ತು ತಜ್ಞರು ಭಾಗವಹಿಸಿದ್ದರು. 150ಕ್ಕೂ ಹೆಚ್ಚು ಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಇದೇ ಸಂದರ್ಭದಲ್ಲಿ ಇ-ಪೋಸ್ಟರ್ ಹಾಗೂ ಕ್ವಿಝ್ ಸ್ಪರ್ಧೆಗಳ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗ ಮುಖ್ಯಸ್ಥೆ ಡಾ.ರೇಖಾ ಲತಾ ಸ್ವಾಗತಿಸಿದರು. ಡಾ.ಜಮೀಲಾ ವಂದಿಸಿದರು.