×
Ad

ಕಾವಳಕಟ್ಟೆ: ಯೆನೆಪೊಯ ದಂತ ಆರೋಗ್ಯ ಕೇಂದ್ರ ಉದ್ಘಾಟನೆ

Update: 2025-08-11 12:24 IST

ಬಂಟ್ವಾಳ: ಯೆನೆಪೊಯ ಡೆಂಟಲ್ ಕಾಲೇಜ್, ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಅಲುಮ್ನಿ ಅಸೋಸಿಯೇಶನ್ ಹಾಗೂ ಹಿದಾಯ ಫೌಂಡೇಶನ್, ಮಂಗಳೂರು ಇದರ ವತಿಯಿಂದ ಕಾವಳಕಟ್ಟೆ ಸುತ್ತಮುತ್ತಲಿನ ಪರಿಸರದ ಜನರಿಗೆ ಉಚಿತ ದಂತ ಚಿಕಿತ್ಸೆ ನೀಡುವ ಉದ್ದೇಶದಿಂದ ಆರಂಭಿಸಿರುವ ಪೆರಿಫೆರಲ್ ಡೆಂಟಲ್ ಹೆಲ್ತ್ ಕ್ಲಿನಿಕ್ ಗೆ ಹಿದಾಯ ಶೇರ್ ಆಂಡ್ ಕೇರ್ ಕಾಲನಿಯಲ್ಲಿ ಚಾಲನೆ ನೀಡಲಾಯಿತು.

ಕ್ಲಿನಿಕ್ ಅನ್ನು ಮಾಜಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಿ, ಬಳಿಕ ನಡೆದ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

 

ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ಅಧ್ಯಕ್ಷ ಹನೀಫ್ ಹಾಜಿ ಗೋಳ್ತಮಜಲು ಅಧ್ಯಕ್ಷತೆ ವಹಿಸಿದ್ದರು. ಯೆನೆಪೊಯದ ಡಾ. ಲಕ್ಷ್ಮಿಕಾಂತ್ ಚಾತ್ರ, ಡಾ.ಅಖ್ತರ್ ಹುಸೈನ್, ಡಾ.ಶ್ಯಾಮ್ ಎಸ್. ಭಟ್, ಜಿಪಂ ಮಾಜಿ ಸದಸ್ಯ ಪದ್ಮಶೇಖರ್ ಜೈನ್, ಡಾ.ರೇಖಾ ಶೆಣೈ, ಡಾ.ರೂಬನ್, ಡಾ.ಮಹಮೂದ್, ಡಾ.ಇಮ್ರಾನ್ ಪಾಷಾ, ಹಿದಾಯ ಫೌಂಡೇಶನ್ ನ ಆಬಿದ್ ಅಸ್ಗರ್, ಕಾಸಿಂ ಅಹ್ಮದ್, ಅಖ್ತರ್ ಹುಸೈನ್, ಆಸಿಫ್ ಇಕ್ಬಾಲ್, ಕೆ.ಎಸ್.ಅಬೂಬಕರ್, ಹಂಝ ಬಸ್ತಿಕೋಡಿ, ಅಬ್ದುಲ್ಲ ಮಂಗಳೂರು, ಬಶೀರ್ ವಗ್ಗ, ಇಲ್ಯಾಸ್ ಕಕ್ಕಿಂಜೆ, ರಶೀದ್ ಕಕ್ಕಿಂಜೆ, ಬಿ.ಮುಹಮ್ಮದ್ ತುಂಬೆ, ಇಬ್ರಾಹೀಂ ಖಲೀಲ್, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು.

ಹಕೀಂ ಕಲಾಯಿ ಸ್ವಾಗತಿಸಿದರು. ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು, ಡಾ.ಸೋನು ರಮಾದಾನ್ ವಂದಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News