×
Ad

ಎಂಸಿಸಿ ಬ್ಯಾಂಕ್ ಸುರತ್ಕಲ್ ಶಾಖಾ ಕಚೇರಿಯಲ್ಲಿ ಎಟಿಎಂ ಉದ್ಘಾಟನೆ

Update: 2025-08-11 16:04 IST

ಮಂಗಳೂರು, ಆ.11: ಎಂ.ಸಿ.ಸಿ. ಬ್ಯಾಂಕಿನ ಸುರತ್ಕಲ್ ಶಾಖೆಯಲ್ಲಿ ತನ್ನ 10ನೇ ಎಟಿಎಂ ಉದ್ಘಾಟನೆಗೊಂಡಿತು.

ಉಪಯೋಗಿಸಿದ ವಾಹನ ಮಾರಾಟ ಸಲಹೆಗಾರ ಮುಹಮ್ಮದ್ ಹನೀಫ್ ಎಟಿಎಂ ಅನ್ನು ಅಧಿಕೃತವಾಗಿ ಉದ್ಘಾಟಿಸಿದರು.

 

ಎಟಿಎಂ ನಿಂದ ಮೊದಲ ನಗದು ಹಿಂಪಡೆಯುವಿಕೆಯನ್ನು ಶ್ರೀ ದುರ್ಗಾ ಫೈನಾನ್ಶಿಯಲ್ ಕಾರ್ಪೊರೇಷನ್ ನ ಮಾಲಕ ಮೆಬೈಲ್ ಸದಾಶಿವ ಶೆಟ್ಟಿ ಮಾಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮಾತನಾಡಿ, ಕಳೆದ ಎಂಟು ವರ್ಷಗಳಲ್ಲಿ 500 ಕೋಟಿ ರೂ. ವ್ಯವಹಾರದಿಂದ 1,300 ಕೋಟಿ ರೂ. ತಲುಪಿದ ಬ್ಯಾಂಕಿನ ಪ್ರಗತಿಯನ್ನು ವಿವರಿಸಿದರು.

 

ಸುರತ್ಕಲ್ನ ಸೇಕ್ರೆಡ್ ಹಾರ್ಟ್ ಚರ್ಚ್ನ ಧರ್ಮಗುರು ಫಾ.ಆಸ್ಟಿನ್ ಪೀಟರ್ ಪೆರಿಸ್ ಆಶೀರ್ವಚನಗೈ ದರು.

ಮುಕ್ಕಾದ ಹೋಲಿ ಸ್ಪಿರಿಟ್ ಚರ್ಚ್ನ ಧರ್ಮಗುರು ಫಾ.ಸ್ಟ್ಯಾನಿ ಪಿಂಟೊ ಶುಭ ಹಾರೈಸಿದರು.

ಬ್ಯಾಂಕಿನ ಜನರಲ್ ಮ್ಯಾನೇಜರ್ ಸುನೀಲ್ ಮಿನೇಜಸ್ ಸ್ವಾಗತಿಸಿದರು. ಎಂಸಿಸಿ ಬ್ಯಾಂಕಿನ ಸಿಬ್ಬಂದಿ ಸದಸ್ಯ ಅಲ್ವಿನ್ ಕ್ಸೇವಿಯರ್ ಡಿಸೋಜ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು.

ಶಾಖೆಯ ನಿರ್ದೇಶಕ ಅನಿಲ್ ಪತ್ರಾವೊ, ನಿರ್ದೇಶಕರಾದ ಹೆರಾಲ್ಡ್ ಮೋಂತೇರೊ, ಐರಿನ್ ರೆಬೆಲ್ಲೊ, ಶಾಖಾ ವ್ಯವಸ್ಥಾಪಕಿ ಸುನೀತಾ ಡಿಸೋಜ, ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೇಜಸ್, ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ಸದಸ್ಯರು ಮತ್ತು ಗ್ರಾಹಕರು ಉಪಸ್ಥಿತರಿದ್ದರು.

ಹಿರಿಯ ವ್ಯವಸ್ಥಾಪಕ ಡೆರಿಲ್ ಲಸ್ರಾದೊ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News