ಸರ್ವ ಧರ್ಮೀಯರ ಸೌಹಾರ್ದ ಕೂಟ ಕಾಟಿಪಳ್ಳ ವತಿಯಿಂದ ಸ್ವಾತಂತ್ರ್ಯ ಸಂಜೆ, ಸೌಹಾರ್ದ ಚಹಾ ಕೂಟ
ಕಾಟಿಪಳ್ಳ: ಸರ್ವ ಧರ್ಮೀಯರ ಸೌಹಾರ್ದ ಕೂಟ ಕಾಟಿಪಳ್ಳ ಇದರ ವತಿಯಿಂದ ಸ್ವಾತಂತ್ರ್ಯ ದಿನದಂದು ಸ್ವಾತಂತ್ರ್ಯ ಸಂಜೆ ಮತ್ತು ಸೌಹಾರ್ದ ಚಹಾ ಕೂಟ ಕಾರ್ಯಕ್ರಮವೊಂದು ಕಾಟಿಪಳ್ಳ ಶ್ರೀ ಗಣೇಶಪುರ ದೇವಸ್ಥಾನದ ಎದುರುಗಡೆ ಇರುವ ನವೋದಯ ಕಲಾ ವೇದಿಕೆಯಲ್ಲಿ ಜರಗಿತು.
ವೇದಿಕೆಯಲ್ಲಿ ಹಿಂದೂ - ಮುಸ್ಲಿಂ - ಕ್ರೈಸ್ತ ಧರ್ಮದ ಪ್ರತಿನಿಧಿಗಳಾಗಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಧರ್ಮೇಂದ ಗಣೇಶಪುರ, ಕಾಟಿಪಳ್ಳ ಮಸೀದಿಯ ಅಧ್ಯಕ್ಷರಾದ ಹಾಜಿ ಎಸ್ ರಹ್ಮತುಲ್ಲಾ ಕಾಟಿಪಳ್ಳ ಇಂಫೆನ್ಟ್ ಮೇರಿ ಚರ್ಚ್ ಧರ್ಮಗುರು ಫಾದರ್ ಸಂತೋಷ್ ಲೋಬೊ ರವರು ಭಾಗವಹಿಸಿ ಸರ್ವ ಜಾತಿ ಮತ ಪಂಥದ ಜನರು ಸೌಹಾರ್ದಹಯುತ ಬದುಕಿಗೆ ಬೇಕಾದ ಅಗತ್ಯತೆಯ ಬಗ್ಗೆ ತಮ್ಮ ಅನಿಸಿಕೆ ಗಳನ್ನು ವ್ಯಕ್ತಪಡಿಸುವ ಮೂಲಕ ಯುವಕರು ಇಂತಹ ಸಭೆಗಳಿಗೆ ಹೆಚ್ಚು ಹೆಚ್ಚು ಭಾಗವಹಿಸುವಂತಹ ಕಾರ್ಯಕ್ರಮ ಗಳನ್ನು ರೂಪಿಸಬೇಕೆಂದು ಹೇಳಿದರು.
ಕೃಷ್ಣಾಪುರ ಕೇಂದ್ರ ಜುಮಾ ಮಸೀದಿಯ ಧರ್ಮಗುರು ಮೌಲಾನಾ ಫಾರೂಕ್ ಸಖಾಫಿ ಸ್ವತಂತ್ರ ಭಾರತದ ನವ ನಿರ್ಮಾಣಕ್ಕೆ ಹಾಗೂ ಕೋಮು ವೈಷಮ್ಯವನ್ನು ನಿರ್ಮೂಲನೆ ಮಾಡುವ ಕುರಿತು ಉತ್ತಮ ಸಂದೇಶವನ್ನು ನೀಡಿ ದರು . ಸುರತ್ಕಲ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ ಜನಾರ್ಧನ್ ನಾಯಕ್ ರವರು ವಿಶೇಷ ಆಹ್ವಾನಿತರಾಗಿ ಆಗಮಿಸಿ, ಇಂತಹ ವಿಶಿಷ್ಟ ಕಾರ್ಯಕ್ರಮಗಳನ್ನು ಪ್ರತಿಯೊಂದು ಕಡೆಯಲ್ಲೂ ಮಾಡುವ ಮೂಲಕ ಒಂದು ಊರಿನ ನಾಗರಿಕರು ಸೌಹಾರ್ದ ಬದುಕೆಗೆ ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದ ಬದುಕಲು ಸಹಕಾರಿ ಎಂದು ಸಂತಸ ವ್ಯಕ್ತಪಡಿಸಿದರು . ನವೋದಯ ಯುವಕ ಮಂಡಲದ ಗೌರವಾಧ್ಯಕ್ಷ ರಘುರಾಮ್ ತಂತ್ರಿ, ಶ್ರೀ ಆನಂದ್ ಅಮೀನ್ ಶ್ರೀ ವಿಠಲ್ ಶೆಟ್ಟಿಗಾರ್, ಸಯ್ಯದ್ ಹಾಮಿದ್ ಇಸ್ಮಾಯಿಲ್ ತಂಙಳ್ ಮೊಹಿದ್ದೀನ್ ಅಲ ಸಫರ್ ಉಮಾನಾಥ ಅಮೀನ್, ನಿತ್ಯಾನಂದ ಕೈಕಂಬ ಹಾಗೂ ಸರ್ವ ಧರ್ಮದ ಗಣ್ಯ ಮಹನೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಸೌಹಾರ್ದ ಕೂಟದ ಸಂಚಾಲಕರಾದ ಎಂ.. ಅಬ್ದುಲ್ ಖಯ್ಯೂಮ್ ಕಾಟಿಪಳ್ಳ ರವರು ಸೇರಿದ ಸರ್ವ ಧರ್ಮ ಸಹೋದರರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಬ್ದುಸ್ಸಮದ್ ಕಾಟಿಪಳ್ಳ ಕಾರ್ಯಕ್ರಮವನ್ನು ನಿರೂಪಿಸಿದರು.