×
Ad

ಎಂಸಿಸಿ ಬ್ಯಾಂಕಿನಲ್ಲಿ ಎನ್‌ಅರ್‌ಐ ಸಮಾವೇಶ

Update: 2025-08-18 21:08 IST

ಮಂಗಳೂರು: ನೂರ ಹದಿಮೂರು ವರ್ಷಗಳ ಸಮರ್ಪಿತ ಸೇವೆಯ ಪರಂಪರೆಯನ್ನು ಹೊಂದಿರುವ ಪ್ರತಿಷ್ಠಿತ ಬ್ಯಾಂಕ್ ಎಂಸಿಸಿ ಬ್ಯಾಂಕ್‌ನ ಆಶ್ರಯದಲ್ಲಿ ಎನ್‌ಆರ್‌ಐ ಸಮಾವೇಶ ಮಂಗಳೂರಿನ ಅತ್ತಾವರದಲ್ಲಿರುವ ದಿ ಅವತಾರ್ ಹೋಟೆಲ್‌ನಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಅವರು ಇತ್ತೀಚಿನ ಆವಿಷ್ಕಾರಗಳು ಗ್ರಾಹಕರ ವಿಶ್ವಾಸವನ್ನು ಹೆಚ್ಚಿಸಿವೆ ಮತ್ತು ಬ್ಯಾಂಕಿನ ನಿರಂತರ ಬೆಳವಣಿಗೆಯಲ್ಲಿ ಅನಿವಾಸಿ ಭಾರತೀಯರ ಪ್ರಮುಖ ಪಾತ್ರವನ್ನು ಎತ್ತಿ ತೋರಿಸಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಕಂಕನಾಡಿಯ ಎಫ್‌ಎಂಸಿಐ ನಿರ್ದೇಶಕ ವಂ. ಫೌಸ್ಟಿನ್ ಲೋಬೊ ಉದ್ಘಾಟಿಸಿ ಮಾತನಾಡಿ ನಿರಂತರವಾಗಿ ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳುವ ಮಹತ್ವವನ್ನು ವಿವರಿಸಿದರು. ಎನ್‌ಆರ್‌ಐಗಳು ತಮ್ಮ ತಾಯ್ನಾಡು ಮತ್ತು ಮಾತೃಭಾಷೆಯ ಬಗ್ಗೆ ಕಾಳಜಿ ವಹಿಸುವಂತೆ ಕರೆ ನೀಡಿದರು.

ರಿಲಯೆಬಲ್ ಫೆಬ್ರಿಕೇಟರ್ಸ್ ಎಲ್‌ಎಲ್‌ಸಿ ಮಾಲಕ ಜೇಮ್ಸ್ ಮೆಂಡೋನ್ಸಾ, ಅಬುಧಾಬಿ ಅಮಿಗೋ ಆಟೋಮೊಬೈಲ್ ಸರ್ವೀಸಸ್ ಎಸ್‌ಪಿ ಎಲ್‌ಎಲ್‌ಸಿ ಆಡಳಿತ ನಿರ್ದೇಶಕ ಲಿಯೊ ರೊಡ್ರಿಗಸ್ ಮತ್ತು ಲಿಯೊ ರೊಡ್ರಿಗಸ್ ಪತ್ನಿ ಲವೀನಾ ರೋಡ್ರಿಗಸ್ ,ಡೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ ಗೌರವ ಅತಿಥಿಗಳಾಗಿದ್ದರು.

ಅಶೋಕನಗರ ಶಾಖೆಯ ಅನಿವಾಸಿ ಭಾರತೀಯ ಗ್ರಾಹಕ ಅರುಣ್ ಐವಾನ್ ಲೋಬೊ ಅವರ 49ನೇ ಹುಟ್ಟುಹಬ್ಬದ ಆಚರಿಸಲಾಯಿತು.

ಅಬುಧಾಬಿಯ ಕೊಂಕಣಿ ಸಾಂಸ್ಕೃತಿಕ ಸಂಘದ (ಕೆಸಿಒ) ಪದಾಧಿಕಾರಿಗಳಾದ ಲಿಯೋ ರೊಡ್ರಿಗಸ್ (ಅಧ್ಯಕ್ಷರು), ವಲೇರಿಯನ್ ಅಲ್ಮೇಡಾ (ಉಪಾಧ್ಯಕ್ಷರು), ಬೆನೆಟ್ ಡಿ ಮೆಲ್ಲೊ (ಮನರಂಜನಾ ಕಾರ್ಯದರ್ಶಿ) ಮತ್ತು ಫ್ರಾಂಕ್ಲಿನ್ ಡಿ ಕುನ್ಹಾ (ಪರ್ಲ್ ಜುಬಿಲಿ ಕನ್ವೀನರ್) ಸೇರಿದಂತೆ ಹಲವಾರು ವಿಶಿಷ್ಟ ಅನಿವಾಸಿ ಭಾರತೀಯ ಕೊಡುಗೆದಾರರು ಮತ್ತು ಸಾಧಕರನ್ನು ಸನ್ಮಾನಿಸಲಾಯಿತು.

ಪ್ರಖ್ಯಾತ ಭರತನಾಟ್ಯ ಕಲಾವಿದೆಯಾಗಿರುವ ರೆಮೋನಾ ಪಿರೇರಾ ಅವರು ತಮ್ಮ ಅಸಾಧಾರಣ 170 ಗಂಟೆಗಳ ನಿರಂತರ ಭರತನಾಟ್ಯ ಪ್ರದರ್ಶನಕ್ಕಾಗಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅನ್ನು ಪ್ರವೇಶಿಸಿದ್ದಕ್ಕಾಗಿ ವಿಶೇಷವಾಗಿ ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಜೆರಾಲ್ಡ್ ಸಿಲ್ವಾ, ನಿರ್ದೇಶಕರ ಮಂಡಳಿಯ ಸದಸ್ಯರಾದ ಜೋಸೆಫ್ ಎ. ಪತ್ರಾವೊ, ಆಂಡ್ರ್ಯೂ ಡಿ ಸೋಜ , ಡಾ. ಜೆರಾಲ್ಡ್ ಪಿಂಟೊ, ಡೇವಿಡ್ ಡಿ ಸೋಜ, ಎಲ್ರಾಯ್ ಕೆ. ಕ್ರಾಸ್ತಾ, ಜೆ.ಪಿ. ರೋಡ್ರಿಗಸ್, ಹೆರಾಲ್ಡ್ ಮೊಂತೆರೊ, ರೋಶನ್ ಡಿ ಸೋಜ, ಐರಿನ್ ರೆಬೆಲ್ಲೊ,ಡಾ. ಪ್ರೀಡಾ ಡಿ ಸೋಜ, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಅಲ್ವಿನ್ ಪಿ. ಮೊಂತೆರೊ ಮತ್ತು ಶರ್ಮಿಳಾ ಮಿನೇಜಸ್ ಉಪಸ್ಥಿತರಿದ್ದರು.

ಆಲ್ವಿನ್ ಡಿ ಸೋಜ ಮತ್ತು ತಂಡದಿಂದ ಪ್ರಾರ್ಥನಾ ಗೀತೆ. ನಂತರ ಎಂಸಿಸಿ ಬ್ಯಾಂಕಿನ ಬೆಳವಣಿಗೆ,ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸುವ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು, ಉಪ ಪ್ರಧಾನ ವ್ಯವಸ್ಥಾಪಕ ರಾಜ್ ಮಿನೆಜಸ್ ಅವರು ಬ್ಯಾಂಕಿನ ಬದ್ಧತೆಯನ್ನು ಪುನರುಚ್ಚರಿಸುವ ಮೂಲಕ ಅನಿವಾಸಿ ಭಾರತೀಯ ಗ್ರಾಹಕರಿಗೆ ಅನುಗುಣವಾಗಿ ವಿವಿಧ ಸೇವೆಗಳ ವಿವರವಾದ ಅವಲೋಕನವನ್ನು ನೀಡಿದರು.

ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡೇವಿಡ್ ಡಿ ಸೋಜ ಸ್ವಾಗತಿಸಿ, ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್ ವಂದಿಸಿದರು. ಮನೋಜ್ ಫೆನಾರ್ಂಡಿಸ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News