×
Ad

ಕಾಪು : ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶ್‍ನಿಂದ ಅಭಿನಂದನೆ

Update: 2025-08-18 21:13 IST

ಕಾಪು : ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಸಂಸ್ಥೆಯು, ರಾಜ್ಯದ್ಯಂತ ಕುರ್‍ಆನ್ ಮತ್ತು ಪ್ರವಾದಿಯವರ ಚರ್ಯೆಯ ಸಾಹಿತ್ಯವನ್ನು ನೀಡಿ ವಾರ್ಷಿಕ ಪರೀಕ್ಷೆ ನಡೆಸಿ, ಅದರಲ್ಲಿ ಉತ್ತೀರ್ಣರದವರಿಗೆ ಮತ್ತು ಡಿಸ್ಟಿಂಕ್ಷನ್‍ನಲ್ಲಿ ತೇರ್ಗಡೆಯದವರನ್ನು ಕಾಪುವಿನ ಕೆಒನ್ ಹೊಟೇಲ್‍ನಲ್ಲಿ ರವಿವಾರ ಅಭಿನಂದಿಸಲಾಯಿತು.

ಆಯಿಷಾ ಮಸ್ಜಿದ್ ನೆಜಾರ್‌ ಧರ್ಮ ಗುರುಗಳಾದ ಮೌಲಾನ ಆದಿಲ್ ನದ್ವಿ, ಮಾತನಾಡಿ, ಮನುಷ್ಯನಿಗೆ ವಿದ್ಯೆ ಇಲ್ಲದಿದ್ದರೆ ಆತನ ಬದುಕು ಬರೀ ಶೂನ್ಯ. ಕೇವಲ ಸಂಪತ್ತಿನಿಂದ ಅವನಿಗೆ ಏನೂ ಸಾಧಿಸಲು ಸಾಧ್ಯವಾಗುದಿಲ್ಲ. ವಿದ್ಯೆಯ ಮೂಲಕ ಜ್ಞಾನಗಳಿಸಲು ಪ್ರಯತ್ನಿಸಬೇಕು. ಲೌಕಿಕ ಜ್ಞಾನ ಗಳಿಸುದರೊಂದಿಗೆ, ಧಾರ್ಮಿಕ ಜ್ಞಾನವನ್ನು ಕೂಡಾ ಅಷ್ಟೇ ಮುತುವರ್ಜಿಯಿಂದ ಗಳಿಸಬೇಕು. ಈ ಬಗ್ಗೆ ಪವಿತ್ರ ಕುರ್‍ಆನ್‍ನಲ್ಲಿ ಸ್ಪಷ್ಟವಾಗಿ ತಿಳಿಸಿದೆ ಎಂದು ಯವರು ಹೇಳಿದರು.

ಜಮಾಅತೆ ಇಸ್ಲಾಮಿ ಹಿಂದ್‍ನ ಸದಸ್ಯೆ ರೇಷ್ಮಾ ಬೈಲೂರು ಮಾತನಾಡಿದರು. ಬಿ.ಐ.ಇ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದವರನ್ನು ಪ್ರಶಸ್ತಿ ಮತ್ತು ಸರ್ಟಿಫಿಕೇಟ್ ನೀಡಲಾಯಿತು. ಎಸ್‍ಐಓ ಮತ್ತು ಜಿಐಓ ವರ್ತುಲದಲ್ಲಿ ಭಾಗವಹಿಸುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಎಸ್‍ಎಸ್‍ಎಲ್‍ಸಿಯಲ್ಲಿ ಮತ್ತು ಪಿ.ಯು.ಸಿಯಲ್ಲಿ 80% ಕ್ಕಿಂತ ಹೆಚ್ಚು ಅಂಕ ಗಳಿಸಿದ್ದವರಿಗೆ ಅಭಿನಂದಿಸಲಾಯಿತು. ಸಿಐಓನ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಾಕೀರ್ ಹುಸೈನ್, ಆಸೀಫ್ ಜಿ.ಡಿ, ಅಷ್ಫಾಕ್ ಅಹಮದ್ ಮುಜಾವರ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮೆಹರೂಫ ರವರು ನಿರೂಪಿಸಿದರು. ಸಯ್ಯದ್ ಮುಸ್ತಖೀಮ್ ರವರು ಧನ್ಯವಾದ ನೀಡಿದರು.

ಫರಾನ ಬೇಗಮ್ ಕುರ್‍ಆನ್ ಪಠಿಸಿದರು. ಮುಹಮ್ಮದ್ ಶರೀಫ್ ಶೇಕ್ ಸ್ವಾಗತಿಸಿದರು. ಬಿಐಇನ ಸಂಚಾಲಕಿ ಶೇಹೆನಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News