×
Ad

ಕಳೆದು ಹೋಗಿದ್ದ ಮೊಬೈಲ್ ಮೂಲಕ ಹಣ ವರ್ಗಾವಣೆ: ಪ್ರಕರಣ ದಾಖಲು

Update: 2025-08-23 22:17 IST

ಮಂಗಳೂರು, ಆ.23: ರೈಲಿನಲ್ಲಿ ಪ್ರಯಾಣಿಸುವ ವೇಳೆ ಮಹಿಳೆಯೊಬ್ಬರ ಕಳೆದು ಹೋಗಿದ್ದ ಮೊಬೈಲ್ ಬಳಸಿ ಮಹಿಳೆಯ ಖಾತೆಯಿಂದ 4.09 ಲಕ್ಷ ರೂ. ವರ್ಗಾಯಿಸಿಕೊಂಡು ವಂಚನೆ ಮಾಡಿರುವ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.16ರಂದು ತಾನು ಕೇರಳ ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ರೈಲಿನಲ್ಲಿ ಬಂದಿದ್ದೆ. ಈ ವೇಳೆ ತನ್ನ ಮೊಬೈಲ್ ಕಳೆದು ಹೋಗಿತ್ತು. ಬಳಿಕ ಆ ಮೊಬೈಲ್ ಸ್ವಿಚ್‌ಆಫ್ ಆಗಿತ್ತು. ಈ ಬಗ್ಗೆ ತಾನು ಬ್ಯಾಂಕ್ ಮತ್ತು ಸಿಮ್ ಕಂಪೆನಿಯ ಗ್ರಾಹಕ ಸೇವೆ ವಿಭಾಗಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದೆ. ಆ.8ರಂದು ಕರೆ ಮಾಡಿದಾಗ ರಿಂಗ್ ಆಗಿದ್ದು, ಕರೆ ಮಾಡಿದ ವ್ಯಕ್ತಿ ತನ್ನನ್ನು ರಾಜೇಶ್ ಎಂದು ಪರಿಚಯಿಸಿಕೊಂಡು ಮೊಬೈಲ್ ಸೇಲಂ-ಕೊಯಮತ್ತೂರು ಮಾರ್ಗದಲ್ಲಿ ಸಿಕ್ಕಿದ್ದು, ಕೊಯಮತ್ತೂರು ರೈಲ್ವೆ ಪೊಲೀಸ್ ಠಾಣೆಗೆ ನೀಡುವುದಾಗಿ ತಿಳಿಸಿದ್ದ. ಅದನ್ನು ನಂಬಿ ತಾನು ಆ ದಿನ ಸಂಜೆಯವರೆಗೆ ಕಾದಿದ್ದೆ. ಬಳಿಕ ಆತನಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ನಂತರ ತಾನು ಕಣ್ಣೂರಿನ ಇರಿಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಹಾಗೇ ಹೊಸ ಮೊಬೈಲ್ ಹಾಗೂ ಸಿಮ್ ತೆಗೆದುಕೊಂಡು ಬ್ಯಾಂಕ್ ಖಾತೆಯನ್ನು ಪರಿಶೀಲಿಸಿದಾಗ ಆ.16ರಂದು 10 ಸಾವಿರ ರೂ, 17ರಂದು 3.95 ಲಕ್ಷ ರೂ., 18ರಂದು 4 ಸಾವಿರ ಹೀಗೆ 4.09 ಸಾವಿರ ರೂ. ವರ್ಗಾವಣೆ ಮಾಡಿರುವುದು ಕಂಡು ಬಂದಿದೆ. ಬ್ಯಾಂಕ್ ಸ್ಟೇಟ್‌ಮೆಂಟ್ ಪರಿಶೀಲಿಸಿದಾಗ ಖಾತೆಗೆ 1 ಲಕ್ಷ ರೂ. ಹಣ ಹಾಕಿ ಅದನ್ನು ಬೇರೆ ಬೇರೆ ಸಂದರ್ಭ ವಾಪಸ್ ತೆಗೆದಿರುವುದು ಕೂಡಾ ಕಂಡು ಬಂದಿದೆ. ತನ್ನ ಖಾತೆಯಿಂದ ಒಟ್ಟು 4.09 ಲಕ್ಷ ರೂ.ವನ್ನು ಅಪರಿಚಿತರು ವರ್ಗಾಯಿಸಿ ಕೊಂಡು ವಂಚನೆ ಮಾಡಿದ್ದಾರೆ ಎಂದು ಹಣ ಕಳಕೊಂಡ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News