×
Ad

ಗೋಳಿತ್ತೊಟ್ಟು: ಸ್ಕೂಟರ್ - ಲಾರಿ ಢಿಕ್ಕಿ, ದಂಪತಿಗೆ ಗಂಭೀರ ಗಾಯ

Update: 2025-08-29 21:56 IST

ನೆಲ್ಯಾಡಿ: ಸ್ಕೂಟರ್ ಹಾಗೂ ಲಾರಿ ನಡುವೆ ಡಿಕ್ಕಿ ಸಂಭವಿಸಿ ದಂಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಗೋಳಿತ್ತೊಟ್ಟು ಜಂಕ್ಷನ್‍ನಲ್ಲಿ ಆ.29ರಂದು ಮಧ್ಯಾಹ್ನ ನಡೆದಿದೆ.

ಹಿರೇಬಂಡಾಡಿ ಗ್ರಾಮದ ವಳಕಡಮ ನಿವಾಸಿ ಬೊಮ್ಮಣ್ಣ ಗೌಡ(46) ಹಾಗೂ ಅವರ ಪತ್ನಿ ಕುಸುಮಾವತಿ (35) ಗಾಯಗೊಂಡವರಾಗಿದ್ದಾರೆ. ಇವರು ತಮ್ಮ ದ್ವಿಚಕ್ರ ವಾಹನದಲ್ಲಿ ವಳಕಡಮದಿಂದ ರಾಮಕುಂಜ-ಗೋಳಿತ್ತೊಟ್ಟು ಮಾರ್ಗವಾಗಿ ಸೌತಡ್ಕಕ್ಕೆಂದು ಹೋಗುತ್ತಿದ್ದವರು ಗೋಳಿತ್ತೊಟ್ಟು ಜಂಕ್ಷನ್‍ನಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಕ್ರಾಸ್ ಆಗುತ್ತಿದ್ದಂತೆ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿದ್ದ ಲಾರಿ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ ಬೊಮ್ಮಣ್ಣ ಗೌಡ ಹಾಗೂ ಕುಸುಮಾವತಿಯವರು ಗಂಭೀರ ಗಾಯಗೊಂಡಿದ್ದು ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News