×
Ad

ಬೋಳಂತೂರು ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಆಯ್ಕೆ

Update: 2025-09-02 17:57 IST

ಅಬ್ದುಲ್ ಹಮೀದ್ ಹಿದಾಯತ್

ಬಂಟ್ವಾಳ, ಸೆ.2: ಬೋಳಂತೂರಿನ ಆಟೋ ರಿಕ್ಷಾ ಚಾಲಕ-ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಅಬ್ದುಲ್ ಹಮೀದ್ ಹಿದಾಯತ್ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ ಸಂಘದ ಮಹಾಸಭೆಯಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ಗೋಪಾಲ ನಾರ್ಶ, ಪ್ರಧಾನ ಕಾರ್ಯದರ್ಶಿಯಾಗಿ ಹುಸೈದ್ ಕುಟುಂಬಕೋಡಿ, ಜೊತೆ ಕಾರ್ಯದರ್ಶಿಗಳಾಗಿ ಜಯ ಕೆ.ಹಾಗೂ ಬಶೀರ್ ಸುರಿಬೈಲ್, ಕೋಶಾಧಿಕಾರಿಯಾಗಿ ಹಂಝ ಕುಲ್ಯಾರ್, ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಚಂದ್ರ ಕುಲ್ಯಾರ್, ಖಾದರ್ ಕೆ.ಪಿ.ಬೈಲ್, ಶರೀಫ್ ತಾಳಿಅಡಿ, ಹಾರಿಸ್ ಕೊಕ್ಕಪುಣಿ, ಅನಿಲ್ ಕೊಕ್ಕಪುಣಿ, ಫಯಾಝ್ ಮುರ, ನಾರಾಯಣ ಪಿಲಿಂಜ, ಶರೀಫ್ ಕೋಡಿಕಂಡ, ಅಝೀಝ್‌ ಅಕ್ಕರೆ, ದಿನೇಶ್ ಕೊಕ್ಕಪುಣಿ, ಅಬೂಬಕರ್ ಎಸ್.ಎಚ್., ಹರೀಶ್ ಕೊಕ್ಕಪುಣಿ, ಹೈದರ್ ಸುರಿಬೈಲ್ ಹಾಗೂ ಶಾಕಿರ್ ಗುಳಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News