ಗಾಂಜಾ ಮಾರಾಟ ಪ್ರಕರಣ: ಆರೋಪಿ ಸೆರೆ
Update: 2025-09-02 21:45 IST
ಮಂಗಳೂರು, ಸೆ.2: ನಗರದ ಸುಲ್ತಾನ್ ಬತ್ತೇರಿ ಬಳಿ ಗಾಂಜಾ ಮಾರಾಟ ಮಾಡಲು ಹೋದ ಸುನೀಲ್ ಎಂಬಾತನನ್ನು ಖಚಿತ ಮಾಹಿತಿಯ ಮೇರೆಗೆ ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ 1.294 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. 25 ಗ್ರಾಂ ತೂಕದ 3 ಪ್ಯಾಕೆಟ್, 431 ಮತ್ತು 888 ಗ್ರಾಂ ತೂಕದ ಗಾಂಜಾವನ್ನು ಪ್ಯಾಕೆಟ್‌ಗಳಲ್ಲಿ ಸುತ್ತಿ ತಂದಿದ್ದ. ಜೊತೆಗೆ ತೂಕ ಮಾಪನ ಯಂತ್ರ ಮತ್ತು 500 ರೂ. ನಗದು ಮತ್ತು ಆತನ ಬಳಸಿದ್ದ ಸ್ಕೂಟರ್ ವಶಕ್ಕೆ ಪಡೆಯಾಗಿದೆ. ಖಚಿತ ಮಾಹಿತಿಯಂತೆ ಠಾಣೆಯ ಎಸ್ಸೈ ವಿನಾಯಕ ಇತರ ಸಿಬ್ಬಂದಿಗಳ ಜೊತೆಗೂಡಿ ಆರೋಪಿಯನ್ನು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.