ಕಾಪುವಿನಲ್ಲಿ ಸೀರತ್ ಅಭಿಯಾನಕ್ಕೆ ಚಾಲನೆ
ಕಾಪು : ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ) ವತಿಯಿಂದ ಸೆಪ್ಟೆಂಬರ್ 3 ರಿಂದ 14ರ ವರೆಗೆ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಸೀರತ್ ಅಭಿಯಾನವನ್ನು ಕಾಪು ರ‍್ತುಲದಲ್ಲಿ ಚಾಲನೆ ನೀಡಲಾಯಿತು.
ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸು ವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ ಎಂದು ಕಾಪು ತಾಲ್ಲೂಕು ಸ್ಥಾನೀಯ ಅಧ್ಯಕ್ಷರು ಅನ್ವರ್ ಅಲಿ ಕಾಪು ತಿಳಿಸಿದರು.
ಸಮಾನ ಮನಸ್ಕ ಸಂಘಟನೆಯೊಂದಿಗೆ ವಿಚಾರ ಗೋಷ್ಠಿ, ಚಹಾ ಕೂಟ, ಆಸ್ಪತ್ರೆ ಸಂರ‍್ಶನ, ಹಣ್ಣು ಹಂಪಲು ವಿತರಣೆ, ವೃಧಾಶ್ರಮ ಭೇಟಿ, ಅನಾಥಶ್ರಮ ಭೇಟಿ, ಪುಸ್ತಕ ಬಿಡುಗಡೆ ಕರ‍್ಯಕ್ರಮ, ವೈಯಕ್ತಿಕ ಮತ್ತು ತಂಡ ಭೇಟಿ, ವೈದ್ಯಕೀಯ ತಪಾಸಣಾ ಶಿಬಿರ ಇನ್ನಿತ್ಯಾದಿ ಕಾರ್ಯಕ್ರಮಗಳು ಹಾಕಿ ಕೊಂಡ್ದಿದ್ದು, ಪೋಸ್ಟರ್ ಬಿಡುಗಡೆ ಮಾಡಿ, ಮನೆ ಮನೆಗಳಿಗೆ ತೆರಳಿ ಫೋಲ್ಡರ್, ಸಾಹಿತ್ಯ, ಸನ್ಮರ‍್ಗ ವಿಶೇಷಾಂಕಗಳನ್ನು ನೀಡುವುದರೊಂದಿಗೆ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಅಭಿಯಾನದ ಭಾಗವಾಗಿ ರಾಜ್ಯಾದ್ಯಂತ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸರ‍್ವಜನಿಕ ಸಭೆಗಳು, ಪ್ರಬಂಧ ಸ್ರ‍್ಧೆ ಮುಂತಾದ ಹಲವು ಕರ‍್ಯಕ್ರಮಗಳು ನಡೆಯಲಿವೆ.
ತಂಡದಲ್ಲಿ ಮುಹಮ್ಮದ್ ಹಾಶಿಮ್ ಸಾಹೇಬ್, ಮುಹಮ್ಮದ್ ಇಕ್ಬಾಲ್ ಸಾಹೇಬ್, ಮುಹಮ್ಮದ್ ಅಲಿ, ಮುಹಮ್ಮದ್ ಶರೀಫ್ ಶೇಕ್, ಅಝಮ್ ಶೇಕ್. ಉಪಸ್ಥಿತರಿದ್ದರು.