×
Ad

ಮಂಗಳೂರು: ರೋಹನ್ ಕಾರ್ಪೋರೇಶನ್ ಸಂಸ್ಥೆಯ ವತಿಯಿಂದ ಓಣಂ ಆಚರಣೆ

Update: 2025-09-05 23:18 IST

ಮಂಗಳೂರು, ಸೆ.5: ನಗರದ ರೋಹನ್ ಕಾರ್ಪೋರೇಶನ್ ಸಂಸ್ಥೆಯ ವತಿಯಿಂದ ರೋಹನ್ ಸಿಟಿ ಕಚೇರಿಯಲ್ಲಿ ಶುಕ್ರವಾರ ಓಣಂ ಹಬ್ಬವನ್ನು ಆಚರಿಸಲಾಯಿತು.

ಸಂಸ್ಥೆಯ ನಿರ್ದೇಶಕ ಡಿಯೋನ್ ಮೊಂತೆರೋ ಮತ್ತು ಜನರಲ್ ಮ್ಯಾನೇಜರ್ ಸುಮನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಓಣಂ ಹಬ್ಬದ ಹೂವಿನ ಅಲಂಕಾರ (ಪೂಕಳಂ), ಸಾಂಸ್ಕೃತಿಕ ಕಾರ್ಯಕ್ರಮಗಳು ಆಚರಣೆಗೆ ಮೆರಗು ನೀಡಿತು.

ಈ ಸಂದರ್ಭ ಮಾತನಾಡಿದ ನಿರ್ದೇಶಕ ಡಿಯೋನ್ ಮೊಂತೆರೋ ಓಣಂ ಹಬ್ಬವು ಏಕತೆ ಸಂಕೇತ. ಇಂತಹ ಆಚರಣೆಗಳು ನಮ್ಮ ಬಾಂಧವ್ಯವನ್ನು ಬಲಪಡಿಸುತ್ತವೆ ಎಂದು ಹೇಳಿದರು.

ಎಲ್ಲರೂ ಒಗ್ಗಟ್ಟಿನಿಂದ ಕುಟುಂಬದಂತೆ ಹಬ್ಬವನ್ನು ಆಚರಿಸುತ್ತಿರುವುದು ಸಂತೋಷಕರ. ಇಂತಹ ಸಂದರ್ಭಗಳು ಪರಸ್ಪರ ಗೌರವ ಮತ್ತು ಸ್ನೇಹವನ್ನು ಹೆಚ್ಚಿಸುತ್ತವೆ ಎಂದು ಜನರಲ್ ಮ್ಯಾನೇಜರ್ ಸುಮನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News