ಕೂಲಿ ಕಾರ್ಮಿಕ ನಾಪತ್ತೆ
Update: 2025-09-15 21:26 IST
ಮಂಗಳೂರು, ಸೆ.15: ನಗರದ ಸುಲ್ತಾನ್ ಬತ್ತೇರಿಯಲ್ಲಿ ಮೀನುಗಾರಿಕಾ ಬೋಟ್ ಮೂಲಕ ಮೀನುಗಾರಿಕೆ ಮಾಡುತ್ತಿದ್ದ ಕೂಲಿ ಕಾರ್ಮಿಕ ಛತ್ತಿಸ್‌ಗಢ ಮೂಲಕ ರಾಮ್ ಬ್ರಿಕ್ಷಾ ಸಾಯಿ ಎಂಬಾತ ನಾಪತ್ತೆಯಾದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಶೋಕ್ ರಾಮ್ ಎಂಬವರ ಮೂಲಕ 10 ಮಂದಿ ಛತ್ತೀಸ್‌ಗಢದಿಂದ ಸೆ.3ರಂದು ಮಂಗಳೂರಿಗೆ ಬಂದಿದ್ದರು. ನಂತರ ಬೋಟ್ ಮೂಲಕ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದರು. ಸೆ.5ರಂದು ಸಂಜೆ 6:30ಕ್ಕೆ ಬೋಟ್‌ನಲ್ಲಿ ಕೆಲಸ ಮಾಡುವ ಅಶೋಕ್ ರಾಮ್ ಎಂಬಾತನಲ್ಲಿ ರಾಮ್ ಬ್ರಿಕ್ಷಾ ಸಾಯಿ ನಾನು ಅಂಗಡಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವ ಮರಳಿ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.