ಮಾದಕ ವಸ್ತು ಸೇವನೆ ಆರೋಪ: ಯುವಕ ಸೆರೆ
Update: 2025-09-15 21:28 IST
ಮಂಗಳೂರು, ಸೆ.15: ನಗರದ ಸುಲ್ತಾನ್ ಬತ್ತೇರಿ ಬಳಿ ಯುವಕನೊಬ್ಬನನ್ನು ಮಾದಕ ಸೇವನೆ ಮಾಡಿದ ಆರೋಪದಲ್ಲಿ ಬರ್ಕೆ ಪೊಲೀಸರು ಬಂಧಿಸಿದ್ದಾರೆ.
ಸುಲ್ತಾನ್ ಬತ್ತೇರಿ ರಸ್ತೆ ನಿವಾಸಿ ರಾಕೇಶ್ (33) ಬಂಧಿತ ಆರೋಪಿ. ಸೆ.14ರಂದು ಮಧ್ಯಾಹ್ನ 12:45ಕ್ಕೆ ಸುಲ್ತಾನ್ ಬತ್ತೇರಿ ಬಳಿ ಯುವಕನೊಬ್ಬ ಅಮಲಿನಲ್ಲಿದ್ದಂತೆ ಕಂಡು ಬಂದಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಉಂಟಾಯಿತು. ಬಳಿಕ ವೈದ್ಯಕೀಯ ತಪಾಸಣೆ ನಡೆಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ ಎಂದು ಪ್ರಕರಣ ದಾಖಲಿಸಿರುವ ಬರ್ಕೆ ಪೊಲೀಸರು ತಿಳಿಸಿದ್ದಾರೆ.