×
Ad

ಅಂತರ್‌ರಾಷ್ಟ್ರೀಯ ಕ್ಯಾರಿಕೇಚರ್ ಚಿತ್ರ ಪ್ರದರ್ಶನಕ್ಕೆ ಜಾನ್ ಚಂದ್ರನ್ ಕೃತಿ ಆಯ್ಕೆ

Update: 2025-09-17 21:41 IST

ಮಂಗಳೂರು, ಸೆ.16:ಗಾಂಧಿ ಸ್ಮಾರಕ ನಿಧಿ ಕರ್ನಾಟಕ ಹಾಗೂ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನ್ ಬೆಂಗಳೂರು, ಈಜಿಪ್ಟ್ ಕಾರ್ಟೂನ್ ಪ್ಲಾಟ್‌ಫಾರ್ಮ್ ಇವರು ಜಂಟಿಯಾಗಿ ಗಾಂಧಿ ಸ್ಮಾರಕ ಅಂತರ್‌ರಾಷ್ಟ್ರೀಯ ಕ್ಯಾರಿಕೇಚರ್ ಪ್ರದರ್ಶನವನ್ನು ಆಯೋಜಿಸಿದ್ದು ಇದರಲ್ಲಿ ಕರ್ನಾಟಕದ ಖ್ಯಾತ ವ್ಯಂಗ್ಯಚಿತ್ರಕಾರ ಜಾನ್ ಚಂದ್ರನ್ ರಚಿಸಿದ ಗಾಂಧೀಜಿಯ ಕ್ಯಾರಿಕೇಚರ್ ಚಿತ್ರವು ಪ್ರದರ್ಶನಕ್ಕೆ ಆಯ್ಕೆಗೊಂಡಿದೆ.

ಈ ಅಂತರ್‌ರಾಷ್ಟ್ರೀಯ ಕ್ಯಾರಿಕೇಚರ್ ಪ್ರದರ್ಶನದಲ್ಲಿ ವಿಶ್ವಖ್ಯಾತ ವ್ಯಂಗ್ಯಚಿತ್ರಕಾರರಾದ ಸರ್ ಡೇವಿಡ್ ಲೊ, ಆರ್. ಕೆ. ಲಕ್ಷ್ಮ್ಮಣ್ , ಶಂಕರ್, ರಂಗ ಸಹಿತ 31 ದೇಶಗಳ ಕಲಾವಿದರ ನೂರಕ್ಕೂ ಮಿಕ್ಕಿದ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ಪ್ರದರ್ಶನವು ಅಕ್ಟೋಬರ್ 4ರಂದು ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಕಾರ್ಟೂನಿಸ್ಟ್, ಎಂ ಜಿ ರಸ್ತೆ ಇಲ್ಲಿ ಉದ್ಘಾಟನೆಗೊಳ್ಳಲಿದೆ.

ಸಂತ ಅಲೋಷಿಯಸ್ ಪ್ರೌಢಶಾಲೆಯಲ್ಲಿ ಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಜಾನ್ ಚಂದ್ರನ್ ರವರು ವ್ಯಂಗ್ಯಚಿತ್ರ ರಚನೆಗಾಗಿ ಔಟ್ ಸ್ಟ್ಯಾಂಡಿಂಗ್ ಪರ್ಸನ್ ಪ್ರಶಸ್ತಿ ಸುವರ್ಣ ಸಾಧಕ ಪ್ರಶಸ್ತಿ ,ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ಪಡೆದಿದ್ದು ವ್ಯಂಗ್ಯ ಚಿತ್ರ ದಲ್ಲಿ ಎರಡು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ನಿಮ್ಮಿ ಕಾರ್ಟೂನ್ ಹಾಗೂ ತರಂಗ ವಾರಪತ್ರಿಕೆಯಲ್ಲಿ ತೆನಾಲಿರಾಮನ ಕಾಮಿಕ್ಸ್ ಸರಣಿ ಗಳನ್ನು ರಚಿಸಿ ಪ್ರಖ್ಯಾತರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News