ಮುಕ್ಕಚೇರಿ: ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಉದ್ಘಾಟನೆ
ಉಳ್ಳಾಲ: ಇಲ್ಲಿನ ಅಮೃತ ನಗರೋತ್ಥಾನ - 4 ಹಂತದ ಮುನ್ಸಿಪಾಲಿಟಿ ಯೋಜನೆಯಡಿ ಶಾಸಕ ಯು. ಟಿ ಖಾದರ್ 18 ಲಕ್ಷ ರೂ. ಅನುದಾನದಲ್ಲಿ ನಿರ್ಮಾಣಗೊಂಡ ನಗರ ಸಭೆ ವ್ಯಾಪ್ತಿಯ ಮುಕ್ಕಚೇರಿ 27ನೇ ವಾರ್ಡಿನ ಯು. ಟಿ ಕಾಂಪೌಂಡ್ 2ನೇ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.
ಉಳ್ಳಾಲ ನಗರ ಸಭೆ ಅಧ್ಯಕ್ಷ ಶಶಿಕಲಾ ನೂತನವಾಗಿ ನಿರ್ಮಾಣ ಗೊಂಡ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟಿಸಿದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್ ಮಾತನಾಡಿ ಉಳ್ಳಾಲ ನಗರ ಸಭೆಯ ಎಲ್ಲಾ ಭಾಗದಲ್ಲಿಯೂ ಶಾಸಕ ಯು. ಟಿ ಖಾದರ್ ಅವರು ಅನುದಾನ ವನ್ನು ಇಟ್ಟಿದ್ದಾರೆ ಮುಂದಿನ ದಿನಗಳಲ್ಲಿ ವಾರ್ಡ್ ಸಭೆಯನ್ನು ನಡೆಸಿ ಸಣ್ಣ ಸಣ್ಣ ರಸ್ತೆಗಳಿಗೆ ಅನುದಾನ ನೀಡಲಿದ್ದಾರೆ ಎಂದರು.
ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ ಮಾತನಾಡಿದರು. ಉಳ್ಳಾಲ ನಗರಸಭಾ ಸದಸ್ಯ ಇಬ್ರಾಹಿಂ ಖಲೀಲ್ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು.
ಉಳ್ಳಾಲ ನಗರಸಭೆ ಸದಸ್ಯ ಯು ಎ ಇಸ್ಮಾಯಿಲ್, ಅಝೀಝ್, ಜಿಲ್ಲಾ ಕಾಂಗ್ರೆಸ್ ಸದಸ್ಯ ದೇವಕಿ ಉಳ್ಳಾಲ್, ಉಳ್ಳಾಲ ನಗರ ಕಾಂಗ್ರೆಸ್ ಅಧ್ಯಕ್ಷ ಅಮಿತಾ ಅಶ್ವಿನ್, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ, ಮನ್ಸೂರ್ ಮಂಚಿಲ, ಹಸನ್ ಯು ಎಚ್,ಉಷಾ ಶೆಟ್ಟಿ, ಜಮಾಲ್ ಉಳ್ಳಾಲ ಅಶ್ರಫ್ ಹರೇಕಳ ಮತ್ತಿತರರು ಉಪಸ್ಥಿತರಿದ್ದರು.