×
Ad

ಫಾದರ್ ಮುಲ್ಲರ್‌: ಉಚಿತ ವಾಕ್ , ಶ್ರವಣ ತಪಾಸಣಾ ಶಿಬಿರ

Update: 2025-09-22 21:36 IST

ಮಂಗಳೂರು : ಅಂತರ್‌ರಾಷ್ಟ್ರೀಯ ಶ್ರವಣ ದೋಷಪೂರಿತರ ವಾರದ ಆಚರಣೆಯ ಅಂಗವಾಗಿ ಫಾದರ್ ಮುಲ್ಲರ್ ವಾಕ್ ಮತ್ತು ಶ್ರವಣ ಕಾಲೇಜು ಆಶ್ರಯದಲ್ಲಿ ಉಚಿತ ವಾಕ್ ಮತ್ತು ಶ್ರವಣ ತಪಾಸಣಾ ಶಿಬಿರ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಎಫ್‌ಎಂಸಿಐ ನಿರ್ದೇಶಕ ರೆ.ಫಾ ಫೌಸ್ಟಿನ್ ಲ್ಯೂಕಸ್ ಲೋಬೊ ವಹಿಸಿದ್ದರು, ಅವರು ತಮ್ಮ ಭಾಷಣದಲ್ಲಿ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಜೀವನದ ಹಂತಗಳಲ್ಲಿ ಸಂವಹನ ಮತ್ತು ಪ್ರತಿಬಿಂಬಗಳ ಮಹತ್ವವನ್ನು ಎತ್ತಿ ತೋರಿಸಿದರು. ಮುಖ್ಯ ಅತಿಥಿಯಾಗಿದ್ದ ಇಎನ್‌ಟಿ ಮುಖ್ಯಸ್ಥ ಪ್ರೊ. ಡಾ. ವಿನಯ್ ವಿ ರಾವ್ ಸಾರ್ವಜನಿಕರಿಗೆ ಶಿಬಿರದ ಪ್ರಯೋಜನಗಳನ್ನು ತಿಳಿಸಿದರು.

ಫಾದರ್ ಮುಲ್ಲರ್ ವಾಕ್ ಮತ್ತು ಶ್ರವಣ ಕಾಲೇಜಿನ ಪ್ರಾಂಶುಪಾಲೆ ಡಾ. ಸಿಂಥಿಯಾ ಸಂತುಮೇಯರ್ ಮಾಹಿತಿ ನೀಡಿದರು.

ಉಚಿತ ವಾಕ್ ಮತ್ತು ಶ್ರವಣ ಶಿಬಿರವು ಸೆಪ್ಟೆಂಬರ್ 22 ರಿಂದ 27, 2025 ರವರೆಗೆ ನಡೆಯಲಿದ್ದು, ಉಚಿತ ನೋಂದಣಿ, ಶ್ರವಣೇಂದ್ರಿಯ ಮೌಲ್ಯಮಾಪನ, ಶ್ರವಣ ಸಾಧನಗಳ ವೆಚ್ಚದ ಶೇ 40ರಷ್ಟು ರಿಯಾಯಿತಿ ಇರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News