ಯೂತ್ ಫ್ರೆಂಡ್ಸ್ ಕೆಮ್ಮಾರ : ಮದ್ರಸ ಪಬ್ಲಿಕ್ ಪರೀಕ್ಷೆ ರ‍್ಯಾಂಕ್ ವಿಜೇತೆಗೆ ನಗದು ಪುರಸ್ಕಾರ
ಮಂಗಳೂರು, ಸೆ.22: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ನಡೆಸಿದ ಮದ್ರಸದ 10ನೇ ತರಗತಿಯ ಪಬ್ಲಿಕ್ ಪರೀಕ್ಷೆಯ ಎಲ್ಲಾ ವಿಷಯಗಳಲ್ಲೂ ತಲಾ ನೂರು ಅಂಕ ಪಡೆದು, ರಾಷ್ಟ್ರ ಮಟ್ಟದಲ್ಲಿ ರ್ಯಾಂಕ್ ಗಳಿಸಿದ ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ, ಎಂಜೆಎಂ ಕೆಮ್ಮಾರ ವಿದ್ಯಾರ್ಥಿನಿ ಝೈಬುನ್ನಿಸಾಳಿಗೆ, ಎಸ್‌ಬಿಎಸ್ ವತಿಯಿಂದ ನಡೆದ ಮೌಲಿದ್ ಪಾರಾಯಣ ಹಾಗೂ ಬುರ್ದಾ ಮಜ್ಲಿಸ್ ಕಾರ್ಯಕ್ರಮದಲ್ಲಿ ಯೂತ್ ಫ್ರೆಂಡ್ಸ್ ಕೆಮ್ಮಾರ ವತಿಯಿಂದ 10,001 ರೂ. ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮುದರ್ರಿಸ್ ಆದಂ ಅಹ್ಸನಿ ತುರ್ಕಳಿಕೆ, ಸದರ್ ಉಸ್ತಾದ್ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್, ಯೂತ್ ಫ್ರೆಂಡ್ಸ್ ಅಧ್ಯಕ್ಷ ಝಕರಿಯ್ಯ ಕೆಮ್ಮಾರ, ಉಪಾಧ್ಯಕ್ಷ ಅಬ್ದುಲ್ ರಝಾಕ್, ಕಾರ್ಯದರ್ಶಿಗಳಾದ ಯಾಕೂಬ್, ಜುನೈದ್, ಕೋಶಾಧಿಕಾರಿ ಇಕ್ಬಾಲ್, ಅಧ್ಯಾಪಕರಾದ ಉಮರ್ ಲತೀಫಿ, ಹಾರಿಸ್ ಸಖಾಫಿ, ಅಬ್ದುಲ್ ಖಾದರ್ ಮುಸ್ಲಿಯಾರ್, ಖ್ಯಾತ ಬುರ್ದಾ ಹಾಡುಗಾರ ಮಸ್‌ಊದ್ ಸಅದಿ, ಜಮಾಅತ್ ಮಾಜಿ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ, ಸಾಧು ಕುಂಞಿ ಹಾಜಿ, ಆಡಳಿತ ಸಮಿತಿ ಸದಸ್ಯರು, ಕರ್ನಾಟಕ ಮುಸ್ಲಿಂ ಜಮಾಅತ್, ಎಸ್.ವೈ.ಎಸ್, ಎಸ್.ಎಸ್.ಎಫ್, ಯೂತ್ ಫ್ರೆಂಡ್ಸ್, ಹೆಲ್ಪ್ ಗೈಸ್, ಎಸ್.ಬಿ.ಎಸ್ ಸದಸ್ಯರು, ಜಮಾಅತರು, ವಿದ್ಯಾರ್ಥಿಗಳ ರಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಇದೇ ವೇಳೆ ವಿದ್ಯಾರ್ಥಿನಿಯ ರಕ್ಷಕರು ತರಗತಿ ಅಧ್ಯಾಪಕರಾದ ಎನ್ ಎಂ ಶರೀಫ್ ಸಖಾಫಿ ರವರಿಗೆ ಸ್ಮರಣಿಕೆ ನೀಡಿ ಅಭಿನಂದಿಸಿದರು.