ಒನ್ ಇಂಡಿಯಾ ಒನ್ ಟ್ಯಾಕ್ಸಿ ಆ್ಯಪ್ ಅನಾವರಣ
ಮಂಗಳೂರು: ನ್ಯಾಯಸಮ್ಮತ, ಪಾರದರ್ಶಕ ಬೆಲೆ ನಿಗದಿಪಡಿಸುವ ನಿಟ್ಟಿನಲ್ಲಿ ಟ್ಯಾಕ್ಸಿ ವ್ಯವಸ್ಥೆಯನ್ನು ಡಿಜಿಟಲ್ ಗೊಳಿಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಒನ್ ಇಂಡಿಯಾ ಒನ್ ಟ್ಯಾಕ್ಸಿ ಆ್ಯಪ್ ಬಿಡುಗಡೆಗೊಳಿಸಲಾಗಿದೆ ಎಂದು ಟ್ಯಾಕ್ಸಿ ಚಾಲಕ ಸಂದೀಪ್ ಡಿಸಿಲ್ವಾ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ಲೇಸ್ಟೋರ್‌ನಲ್ಲಿ ಒನ್ ಇಂಡಿಯಾ ಒನ್ ಟ್ಯಾಕ್ಸಿ ಡೌನ್ ಲೋಡ್ ಮಾಡುವ ಮೂಲಕ ಟ್ಯಾಕ್ಸಿ ಕಾಯ್ದಿರಿಸಬಹುದು. ಮನೆ ಬಾಗಿಲಿಗೆ ಟ್ಯಾಕ್ಸಿ ಸೌಲಭ್ಯ ನೀಡಲಾಗುತ್ತಿದೆ. ದ.ಕ.ಜಿಲ್ಲೆಯಲ್ಲಿ 150 ಮಂದಿ ಟ್ಯಾಕ್ಸಿ ಚಾಲಕರು ಆಪ್ಲಿಕೇಶನ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದಾರೆ. ಟೌನರ್ ಎಂಬ ಮೊಬೈಲ್ ಟ್ಯಾಕ್ಸಿ ಮೀಟರ್ ಆಪ್ಲಿಕೇಶನ್ ಅಳವಡಿಸುತ್ತಿದ್ದಾರೆ ಟ್ಯಾಕ್ಸಿ ವ್ಯವಸ್ಥೆ ನಗರಕ್ಕೆ ಸೀಮಿತಗೊಳಿಸದೆ ಗ್ರಾಮೀಣ ಪ್ರದೇಶದಲ್ಲೂ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ. ಸರಕಾರ ನಿಗದಿಪಡಿಸಿದ ದರದಲ್ಲೇ ಸೇವೆ ನೀಡಲಿದ್ದೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಘು, ಪೂರ್ಣೇಶ್, ಚಂದ್ರಶೇಖರ್, ದಾಸ್, ಪತ್ರಪ್ಪ, ಕೃಷ್ಣ ಉಪಸ್ಥಿತರಿದ್ದರು.