ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ನೇತೃತ್ವದಲ್ಲಿ ಬಡ ಕುಟುಂಬಕ್ಕೆ ಮನೆ ಹಸ್ತಾಂತರ
ಸುಳ್ಯ: ದ.ಕ.ಸಂಪಾಜೆ ಗ್ರಾಮದ ಗೂನಡ್ಕದ ದರ್ಖಾಸ್ತುವಿನಲ್ಲಿ ಅಲ್ ಅಮೀನ್ ವೆಲ್ಫೇರ್ ಅಸೋಸಿಯೇಶನ್ ಗೂನಡ್ಕ ಇದರ ನೇತೃತ್ವದಲ್ಲಿ ಸೂರಿಲ್ಲದವರಿಗೆ ಆಸರೆ ಯೋಜನೆಯ ಜಂಟಿ ಸಹಯೋಗದೊಂದಿಗೆ ದಾನಿಗಳ ಸಹಕಾರದಿಂದ ಸುಮಾರು 7 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾದ ಮನೆಯ ಹಸ್ತಾಂತರ ಕಾರ್ಯಕ್ರಮ ಜರುಗಿತು.
ಕರ್ನಾಟಕ ಸರಕಾರದ ಹಜ್ ಸಮಿತಿಯ ಸದಸ್ಯರಾದ ಅಶ್ರಫ್ ತಂಙಲ್ ಆದೂರು ಅವರು ಮನೆಯ ಉದ್ಘಾಟನೆ ನೆರವೇರಿಸಿದರು. ಗೂನಡ್ಕ ಬದ್ರಿಯಾ ಜುಮಾ ಮಸೀದಿಯ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಸಖಾಫಿ ಅಲ್ ಅರ್ಶದಿ, ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ, ಸೂರಿಲ್ಲದವರಿಗೆ ಆಸರೆ ಯೋಜನೆಯ ಪ್ರಮುಖರಾದ ಮಹಮ್ಮದ್ ಕುಕ್ಕುವಳ್ಳಿ, ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಸೋಮಶೇಖರ್ ಕೊಯಿಂಗಾಜೆ, ಕರ್ನಾಟಕ ಸರ್ಕಾರದ ಕಾರ್ಮಿಕ ಕಲ್ಯಾಣ ಮಂಡಳಿಯ ನಿರ್ದೇಶಕರಾದ ಕೆ.ಪಿ.ಜಾನಿ ಕಲ್ಲುಗುಂಡಿ, ಸಜ್ಜನ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಉಮ್ಮರ್ ಬೀಜದಕಟ್ಟೆ, ನ್ಯಾಯವಾದಿ ಅಬೂಬಕ್ಕರ್ ಅಡ್ಕಾರ್, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಸ್.ಕೆ.ಹನೀಫ್, ನಿವೃತ್ತ ಶಿಕ್ಷಕರಾದ ಯು.ಎಸ್. ಚಿದಾನಂದ ಮಾಸ್ತರ್, ಗೂನಡ್ಕ ಜಮಾಅತ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಸ್.ಎ.ಅಶ್ರಫ್ ದೊಡ್ಡಡ್ಕ, ಉಪಾಧ್ಯಕ್ಷರಾದ ಉಮ್ಮರ್ ಪುತ್ರಿ, ಮಾಜಿ ಅಧ್ಯಕ್ಷರುಗಳಾದ ಹಾಜಿ ಪಿ.ಎ.ಉಮ್ಮರ್ ಗೂನಡ್ಕ, ಹಾಜಿ ಅಬ್ದುಲ್ಲ ಕೊಪ್ಪದಕಜೆ, ಡಿ.ಆರ್.ಅಬ್ದುಲ್ ಖಾದರ್, ಕಾರ್ಯದರ್ಶಿ ಹಾಜಿ ಎಸ್.ಎಂ.ಅಬ್ದುಲ್ಲ ಗೂನಡ್ಕ, ಕಲ್ಲುಗುಂಡಿ ಸಿರಾಜುಲ್ ಇಸ್ಲಾಂ ಅಸೋಸಿಯೇಶನ್ ಅಧ್ಯಕ್ಷರಾದ ಎ.ಕೆ.ಇಬ್ರಾಹಿಂ, ಸಂಟ್ಯಾರ್ ಪ್ರತಿಷ್ಠಾನದ ಅಧ್ಯಕ್ಷರಾದ ಎಚ್.ಎ.ಅಶ್ರಫ್ ಬಾಲೆಂಬಿ, ಕಲ್ಲುಗುಂಡಿ ಭಾರತ್ ಹಾರ್ಡ್ ವೇರ್ ಮಾಲಕರಾದ ಕಿಫಾಯತ್ತುಲ್ಲಾ ಎಚ್.ಎ, ಎಸ್.ವೈ.ಎಸ್.ಗೂನಡ್ಕ ಯುನಿಟ್ ಅಧ್ಯಕ್ಷರಾದ ಮುನೀರ್ ಪ್ರಗತಿ, ಎಸ್.ಎಸ್.ಎಫ್.ಅಧ್ಯಕ್ಷರಾದ ಉನೈಸ್ ಗೂನಡ್ಕ, ಎಸ್.ವೈ.ಎಸ್.ಸಂಘಟನೆಯ ಸಿದ್ದೀಕ್ ಗೂನಡ್ಕ, ಅಲ್ ಅಮೀನ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎ.ಟಿ.ಹಸನ್ ದೊಡ್ಡಡ್ಕ, ಉಪಾಧ್ಯಕ್ಷರಾದ ಮಹಮ್ಮದ್ ಪೆಲ್ತಡ್ಕ, ಕೋಶಾಧಿಕಾರಿ ಡಿ.ಎಂ.ಅಬ್ದುಲ್ಲ, ಸಂಘಟನಾ ಕಾರ್ಯದರ್ಶಿ ಟಿ.ಬಿ.ಅಝೀಝ್, ನಿರ್ದೇಶಕರಾದ ಜಾಬಿರ್ ಎಂ.ಬಿ, ಹಾಜಿ ಅಬ್ಬಾಸ್ ಗೂನಡ್ಕ ಸೇರಿದಂತೆ ಜಮಾಅತ್ ಸಮಿತಿಯ ಪದಾಧಿಕಾರಿಗಳು, ಸುನ್ನೀ ಸಂಘಟನೆಗಳ ಪದಾಧಿಕಾರಿಗಳು ಈ ಸಂದರ್ಭ ಉಪಸ್ಥಿತರಿದ್ದರು.
ಅಲ್ ಅಮೀನ್ ಅಧ್ಯಕ್ಷರಾದ ಜಾಫರ್ ಸಾದಿಕ್ ಕುಂಭಕ್ಕೋಡ್ ಗೂನಡ್ಕ ಸ್ವಾಗತಿಸಿ, ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಶೌವಾದ್ ಗೂನಡ್ಕ ಮನೆ ನಿರ್ಮಾಣ ಮಾಡಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸಂಪಾಜೆ ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಕೆ.ಅಬೂಸಾಲಿ ಗೂನಡ್ಕ ವಂದಿಸಿದರು.