ಅಂಗನವಾಡಿ ಕಾರ್ಯಕರ್ತೆ/ಸಹಾಯಯಕಿಯರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮಹತ್ವದ ಸೂಚನೆ
Update: 2025-09-30 23:10 IST
ಮಂಗಳೂರು: ದ. ಕ ಜಿಲ್ಲೆಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 57 ಕಾರ್ಯಕರ್ತೆ ಹಾಗೂ 221 ಸಹಾಯಕಿ ಹುದ್ದೆಗೆ ಗೌರವಧನ ಸೇವೆಗಳ ಹುದ್ದೆಗೆ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು ಈ ತನಕ ಅರ್ಜಿ ಸಲ್ಲಿಸಿದ ಅರ್ಜಿಗಳಲ್ಲಿ ಸಂಪೂರ್ಣ ಹಂತಗಳನ್ನು ಪೂರ್ಣಗೊಳಿಸದಿರುವುದರಿಂದ 753 ಅರ್ಜಿಗಳು ಅಪೂರ್ಣವಾಗಿರುತ್ತವೆ. ಇವುಗಳು ಪರಿಶೀಲನೆಗೆ ಲಭ್ಯವಾಗದೇ ಅನರ್ಹವಾಗುತ್ತವೆ.
ಆದುದರಿಂದ ಅಪೂರ್ಣ ಅರ್ಜಿಯನ್ನು ಸಲ್ಲಿಸಿರುವ ಅಭ್ಯರ್ಥಿಗಳು ಅರ್ಜಿ ಭರ್ತಿ ಮಾಡುವಾಗ ತಮಗೆ ನೀಡಲಾಗಿರುವ ಅರ್ಜಿ ಸಂಖ್ಯೆ ಹಾಗೂ ತಮ್ಮ ಜನ್ಮ ದಿನಾಂಕದ ಮಾಹಿತಿಯನ್ನು https:karnemakaone.kar.nic.in/abcd/ ಪೋರ್ಟಲ್ ನಲ್ಲಿ ನಮೂದಿಸಿ ಅರ್ಜಿ ಸಂಪೂರ್ಣವಾಗಿ ಸಲ್ಲಿಕೆಯಾಗಿರುವ ಕುರಿತು ಖಾತರಿಪಡಿಸಿಕೊಂಡು ಅರ್ಜಿಯನ್ನು ಅಂತಿಮ ದಿನಾಂಕ 10/10/2025ರೊಳಗೆ ಪೂರ್ಣಗೊಳಿಸಲು ಸೂಚಿಸಲಾಗಿದೆ.