×
Ad

ಕೇರಳ ಮೂಲದ ಯುವಕ ನಾಪತ್ತೆ

Update: 2025-10-04 23:10 IST

ಮಂಗಳೂರು, ಅ.4: ನಗರದ ಬಲ್ಮಠದಲ್ಲಿ ಗೇಮಿಂಗ್ ಶಾಪ್ ಹೊಂದಿದ್ದ ಮುಹಮ್ಮದ್ ಶಬೀಬ್ (35) ಎಂಬವರು ನಾಪತ್ತೆಯಾದ ಬಗ್ಗೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಸರಾ ಹಬ್ಬದ ರಜೆಯ ನಿಮಿತ್ತ ಸೆ.26ರಂದು ಶಬೀಬ್‌ರ ಪತ್ನಿ ಕೇರಳದ ಕೊಚ್ಚಿಯ ತಾಯಿ ಮನೆಗೆ ಹೋಗಿದ್ದರು. ಆ ಬಳಿಕ ಪ್ರತಿ ದಿನ ಪತಿಯ ಜತೆ ಮಾತನಾಡುತ್ತಿದ್ದರು. ಅ.2ರಂದು ಬೆಳಗ್ಗೆ ಪತಿಯ ಮೊಬೈಲ್‌ಗೆ ಕರೆ ಮಾಡಿ ಮಾತನಾಡಿದ್ದು, ಸಂಜೆ ಮತ್ತೆ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ ಎನ್ನಲಾಗಿದೆ. ಆ ದಿನ ರಾತ್ರಿ 9:30ಕ್ಕೆ ಸಂಬಂಧಿ ಅಸ್ಪಾಕ್ ಅಹ್ಮದ್‌ ಶಬೀಬ್‌ರೆ ಮನೆಗೆ ಪರಿಶೀಲಿಸಲು ಹೋದಾಗ ಮನೆ ಲಾಕ್ ಆಗಿದ್ದು, ಅಂಗಡಿಯ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರ್ ಕಂಡು ಬಂದಿತ್ತು. ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಅ.2ರಂದು ಸಂಜೆ 6 ಗಂಟೆಗೆ ಸ್ಕೂಟರ್ ನಿಲ್ಲಿಸಿ ನಡೆದುಕೊಂಡು ಹೋಗುವುದು ಕಂಡು ಬಂದಿದೆ. ಮಧುಮೇಹ ಕಾಯಿಲೆಯಿಂದ ಮನನೊಂದು ಅಥವಾ ಷೇರು ವ್ಯವಹಾರದಿಂದ ಬೇಸತ್ತು ಮನೆ ಬಿಟ್ಟು ಹೋಗಿರಬಹುದು ಎಂದು ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News