ಶ್ರಮಿಕಾ. ಆರ್ ಪೂಜಾರಿಗೆ ರಾಷ್ಟ್ರ ಪ್ರಶಸ್ತಿ
Update: 2025-10-05 20:44 IST
ಮಂಗಳೂರು, ಅ.5: ಜಲ್ಲಿಗುಡ್ಡೆಯ ಶ್ರಮಿಕಾ. ಆರ್ ಪೂಜಾರಿ ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಸ್ವಯಂ ಸೇವಕರಾಗಿ ಮಾಡಿದ ನಿಸ್ವಾರ್ಥ ಸಮಾಜ ಸೇವೆಗೆ ರಾಷ್ಟ್ರಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ರಾಷ್ಟ್ರೀಯ ಸಮಗ್ರ ಕಲಾವಿದರು ಹಾಗೂ ಕಾರ್ಯಕರ್ತರ ವೇದಿಕೆ (ಎನ್‌ಐಎಫ್‌ಎಎ) ತನ್ನ ರಜತ ಮಹೋತ್ಸವದ ಸಂಭ್ರಮದ ಅಂಗವಾಗಿ ಹೊಸ ದಿಲ್ಲಿಯಲ್ಲಿ ಸೆ. 21ರಂದು ಭಾರತ ಮಂಟಪ ಸಮಾವೇಶ ಕೇಂದ್ರ ಆಯೋಜಿಸಿದ ರಾಷ್ಟ್ರ ಮಟ್ಟದ ಪ್ರಶಸ್ತಿ ಸಮಾರಂಭದಲ್ಲಿ ಶ್ರಮಿಕಾ. ಆರ್ ಪೂಜಾರಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಯೆನೆಪೋಯ ಪರಿಗಣಿತ ವಿಶ್ವವಿದ್ಯಾಲಯದ ಉದ್ಯೋಗಿಯಾಗಿರುವ ಇವರು ಪಡೀಲ್ ಕರ್ಮಾರ್ ಜಲ್ಲಿಗುಡ್ಡೆಯ ರಮೇಶ್ ಪೂಜಾರಿ-ಮೋಹಿನಿ ದಂಪತಿ ಪುತ್ರಿ.