ಪಿ.ಎಸ್. ಅಬ್ದುರ್ರಹ್ಮಾನ್ ಮದನಿ ಪಾಣೆಮಂಗಳೂರು ನಿಧನ
Update: 2025-10-06 21:51 IST
ಬಂಟ್ವಾಳ, ಅ.6: ಪಾಣೆಮಂಗಳೂರು ನಿವಾಸಿ ಪಿ.ಎಸ್.ಅಬ್ದುರ್ರಹ್ಮಾನ್ ಮದನಿ(80) ಸೋಮವಾರ ರಾತ್ರಿ 7:30ಕ್ಕೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ, ಆರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಪಿ.ಎಸ್.ಅಬ್ದುರ‌್ರಹ್ಮಾನ್ ಅವರು ಉಳ್ಳಾಲ, ಉಳ್ಳಾಲ ಪೇಟೆ, ಬೆಳ್ತಂಗಡಿ, ಜೋಕಟ್ಟೆ ಪೊರ್ಕೋಡಿ, ತಲಪಾಡಿ, ಅರ್ಕಾಣ, ವಗ್ಗ, ಜೆಪ್ಪು, ಚಾಪಳ್ಳ ಮುಂತಾದ ಕಡೆಗಳಲ್ಲಿ ಧಾರ್ಮಿಕ ಸೇವೆಗೈದಿದ್ದಾರೆ.
ಮೃತರ ಅಂತ್ಯಕ್ರಿಯೆ ಮಂಗಳವಾರ ಬೆಳಗ್ಗೆ ಅಕ್ಕರಂಗಡಿ ಮಸೀದಿಯ ವಠಾರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.