×
Ad

ಯೆನೆಪೋಯ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Update: 2025-10-08 21:35 IST

ಮಂಗಳೂರು, ಅ.8: ಯೆನೆಪೋಯ ಮೊಯ್ದೀನ್ ಕುಂಞ್ಞ ಶೈಕ್ಷಣಿಕ ಮತ್ತು ಚಾರಿಟೇಬಲ್ ಟ್ರಸ್ಟ್ ಜೆಪ್ಪಿನಮೊಗರು ಮಂಗಳೂರು ಇವರು ಶಿಕ್ಷಕರಿಗೆ ಶಿಕ್ಷಣ ಕ್ಷೇತ್ರದಲ್ಲಿ ಶ್ರೇಷ್ಠತೆ ಹಾಗೂ ನಾವೀನ್ಯತೆಗಳನ್ನು ಪ್ರೋತ್ಸಾಹಿಸುವ ಯೆನೆಪೋಯ ಶಿಕ್ಷಕ ಪ್ರಶಸ್ತಿ-2025’ ಅರ್ಜಿ ಆಹ್ವಾನಿಸಲಾಗಿದೆ.

ಈ ಶಿಕ್ಷಕ ಪ್ರಶಸ್ತಿಗೆ ಪ್ರಾಥಮಿಕ ಶಾಲಾ ಶಿಕ್ಷಕರು, ಪ್ರೌಢ ಶಾಲಾ ಶಿಕ್ಷಕರು, ಕಲೆ ಮತ್ತು ಕರಕುಶಲ ಶಿಕ್ಷಕರು, ದೈಹಿಕ ಶಿಕ್ಷಣ ಶಿಕ್ಷಕರು, ಪದವಿ ಪೂರ್ವ ಕಾಲೇಜು ಶಿಕ್ಷಕರು, ಮುಖ್ಯೋಪಾಧ್ಯಾಯರು, ಪ್ರಾಂಶುಪಾಲರು ಅರ್ಜಿ ಸಲ್ಲಿಸಬಹುದು.

ಯಾವುದೇ ರಾಜ್ಯ, ಕೇಂದ್ರ ಅಥವಾ ಖಾಸಗಿ ಶಾಲಾ ಯೋಜನೆಯಡಿಯಲ್ಲಿ ಸರಕಾರಿ, ಅನುದಾನಿತ, ಅನುದಾನರಹಿತ ಸಂಸ್ಥೆಯಲ್ಲಿ ಸೇವೆ ಸಲ್ಲಿಸುವವರಾಗಿರಬೇಕು.

ಈ ಶಿಕ್ಷಕ ಪ್ರಶಸ್ತಿಗೆ ಅರ್ಹರಾದವರಿಗೆ ರೂಪಾಯಿ 15000 ರೂ. ನ್ನು ನವೆಂಬರ್ 14, 2025 ಸ್ಥಾಪಕರ ದಿನದಂದು ಸನ್ಮಾನಿಸಿ ಹಸ್ತಾಂತರಿಸಲಾಗುವುದು, ಈ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ಹೊಂದಿರಬೇಕಾದ ಅರ್ಹತೆಯ ವಿವರ ಇಂತಿವೆ.

ಅರ್ಜಿದಾರನು 10 ವರ್ಷಗಳ ಬೋಧನಾ ಸೇವೆಯನ್ನು ಪೂರ್ಣಗೊಳಿಸಿರಬೇಕು, ಶಿಕ್ಷಣ ಕ್ಷೇತ್ರದಲ್ಲಿ ಅರ್ಹತೆ ಹಾಗೂ ಶ್ರೇಷ್ಠತೆಯ ದಾಖಲೆಯನ್ನು ಸಾಬೀತುಪಡಿಸಿರಬೇಕು.

ವಾರ್ಷಿಕ ಪ್ರಶಸ್ತಿಗೆ ಶಿಕ್ಷಕರನ್ನು ಆಯ್ಕೆ ಮಾಡಲು ಟ್ರಸ್ಟ್‌ನಿಂದ ಶಿಕ್ಷಣ ಕ್ಷೇತ್ರದ ತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲಾಗಿದೆ. ಶಿಕ್ಷಕರು ಅರ್ಜಿ ನಮೂನೆಯನ್ನು ಸಂಸ್ಥೆಯ ಮುಖ್ಯಸ್ಥರು/ಕ್ಷೇತ್ರ ಶಿಕ್ಷಣಾಧಿಕಾರಿ ಇವರಿಂದ ದೃಢೀಕರಿಸಿದ ಎಲ್ಲಾ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದ ಮೊದಲು ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 1. ಹೆಚ್ಚಿನ ವಿವರಗಳಿಗಾಗಿ ಯೆನೆಪೋಯ ಸ್ಕೂಲ್ ಜೆಪ್ಪಿನಮೊಗರು (08242241846 / 9945922705 / 8217392045) ಸಂಪರ್ಕಿಸುವಂತೆ ಯೆನೆಪೋಯ ಶಾಲೆಯ ಸಹಾಯಕ ನಿರ್ದೇಶಕ ಅಂಥೋನಿ ಜೋಸೆಫ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News