ಮಾದಕ ವಸ್ತು ಸೇವನೆ ಆರೋಪ: ನಾಲ್ವರ ವಿರುದ್ಧ ಪ್ರಕರಣ ದಾಖಲು
Update: 2025-10-08 21:48 IST
ಮಂಗಳೂರು, ಅ.8: ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡ್ರಗ್ಸ್ ಸೇವನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿರುವ ಘಟನೆ ಬುಧವಾರ ವರದಿಯಾಗಿದೆ.
ಬಂಗ್ರ ಕೂಳೂರು ಬಳಿ ಮಾದಕ ವಸ್ತು ಸೇವನೆ ಆರೋಪದಲ್ಲಿ ಬೈಕಂಪಾಡಿಯ ನೋಯಲ್ ಪಿಯೂಷ್ ಡಿ ಸೋಜ (23) ವಿರುದ್ದ, ಮೇರಿಹಿಲ್ ಜಂಕ್ಷನ್‌ನಲ್ಲಿ ಕೊಂಚಾಡಿಯ ಉದಿತ್ ಬಿ(29) ಮತ್ತು ಕಾವೂರು ಜಂಕ್ಷನ್ ಬಳಿ ಮಾದಕ ವಸ್ತು ಸೇವನೆ ಮಾಡಿ ನಿಂತಿದ್ದ ಶಕ್ತಿನಗರದ ಜೀತೇಶ(21)ನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ಪದವಿನಂಗಡಿ ಬಳಿ ಮಾದಕ ವಸ್ತು ಸೇವನೆ ಮಾಡಿದ್ದ ಆರೋಪದಲ್ಲಿ ಶಕ್ತಿನಗರದ ವರುಣ್ ಸಾಲಿಯಾನ್(25)ನ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.