×
Ad

ಬಿಕರ್ನಕಟ್ಟೆ: ವೋಟ್ ಚೋರ್ ಗದ್ದಿ-ಚೋಡ್ ಸಹಿ ಸಂಗ್ರಹ ಅಭಿಯಾನ

Update: 2025-10-15 19:58 IST

ಮಂಗಳೂರು, ಅ.15: ವೋಟ್ ಚೋರ್ ಗದ್ದಿ-ಚೋಡ್ ಅಭಿಯಾನವಿ ಬುಧವಾರ ಬಿಕರ್ನಕಟ್ಟೆಯಲ್ಲಿ ನಡೆಯಿತು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತನಾಡಿ ಕೇಂದ್ರದಲ್ಲಿ ಬಿಜೆಪಿ ಸರಕಾರವು ಯಾವುದೇ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳದೆ ಚುನಾವಣೆಯಲ್ಲಿ ಮತಗಳನ್ನು ಕಳವು ಮಾಡಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ಸರಕಾರ ಪಂಚ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಜನರ ಅರ್ಥಿಕ ಪರಿಸ್ಥಿತಿಯನ್ನು ಉನ್ನತ ಮಟ್ಟಕ್ಕೆ ಏರಿಸುವ ಕೆಲಸವನ್ನು ಮಾಡಿದೆ. ಅರ್ಥಿಕ ಸಬಲತೆ ನೀಡಿದೆ. ಅದೇ ರೀತಿ ತಲಾ ಆದಾಯದಲ್ಲಿ ದೇಶದಲ್ಲೇಚ ಕರ್ನಾಟಕ ಸರಕಾರ ಪ್ರಥಮ ಸ್ಥಾನದಲ್ಲಿದೆ. ಹಾಗಾಗಿ ಜನರನ್ನು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ. ಮತವನ್ನು ಕಳ್ಳತನ ಮಾಡುವ ಮೂಲಕ ತಂತ್ರಗಾರಿಕೆಯನ್ನು ಮಾಡುತ್ತಿದೆ. ಹಾಗಾಗಿ ಕಾಂಗ್ರೆಸ್ ಸರಕಾರ ಮತ ಕಳ್ಳತನಕ್ಕೆ ಅಸ್ಪದ ನೀಡುವುದಿಲ್ಲ ಎಂದು ಹೇಳಿದರು.

ಬ್ಳಾಕ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಜೆ.ಆರ್.ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗ್ಡೆ ಮಾತನಾಡಿದರು.

ಮಾಜಿ ಕಾರ್ಪೊರೇಟರ್ ನವೀನ್ ಡಿಸೋಜ. ಮೀನಾ ಟೆಲ್ಲಿಸ್, ಸತೀಶ್ ಪೆಂಗಲ್, ಪ್ರೇಮ್ ಬಲ್ಲಾಲ್‌ಬಾಗ್, ಟಿ.ಕೆ.ಸುಧೀರ್, ಆಲ್ಟೇನ್ ಡಿಕುನ್ಹ, ರಿತೇಶ್ ಶಕ್ತಿನಗರ, ಜೇಮ್ಸ್ ಪ್ರವೀಣ್, ಮಂಜುಳಾ ನಾಯಕ್, ಕ್ರಿಸ್ಟನ್, ಆಶಾಲತಾ, ಟಿಸಿ ಗಣೇಶ್, ಸುನೀತ್, ಪ್ರಧ್ವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News