ಅಕ್ರಮ ಮರಳು ಸಾಗಾಟ: ಓರ್ವನ ಬಂಧನ
Update: 2025-10-16 20:44 IST
ಪಡುಬಿದ್ರಿ, ಅ.16: ಹೆಜಮಾಡಿ ಗ್ರಾಮದ ಕೊಕ್ರಾಣಿ ಪ್ರದೇಶದ ಸರಕಾರಿ ಹೊಳೆಯಲ್ಲಿ ಅಕ್ರಮವಾಗಿ ಮರಳನ್ನು ತೆಗೆಯುತ್ತಿದ್ದ ವ್ಯಕ್ತಿಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಹೆಜಮಾಡಿ ಗ್ರಾಮದ ದಿವಾಕರ ಎಂದು ಗುರುತಿಸಲಾಗಿದೆ. ಟೆಂಪೋ ಮತ್ತು ಮರಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಮುಲ್ಕಿ ಕಡೆಯಿಂದ ಅವರಾಲು ಮಟ್ಟು ಕಡೆಗೆ ಹೋಗುವ ಕಾಂಕ್ರೀಟ್ ರಸ್ತೆಯ ಹೊಳೆಬದಿಯಲ್ಲಿ ಟೆಂಪೋ ನಿಲ್ಲಿಸಲಾಗಿದ್ದು, ಪ್ಲಾಸ್ಟಿಕ್ ಬುಟ್ಟಿಯಿಂದ ಹೊಳೆಯಿಂದ ಮರಳನ್ನು ತುಂಬಿ ಟೆಂಪೋಗೆ ಲೋಡ್ ಮಾಡುತ್ತಿರುವುದು ಪತ್ತೆಯಾಯಿತು. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.