×
Ad

ಶಿಕ್ಷಣ ಕ್ಷೇತ್ರದ ಹೊಸ ಅವಕಾಶಗಳನ್ನು ಬಳಸಬೇಕು ಸಚಿವ ರಹೀಂ ಖಾನ್

*ಸಅದಿಯ್ಯದಲ್ಲಿ ಆಂಡ್ ನೇರ್ಚೆ

Update: 2025-10-20 19:00 IST

ಕಾಸರಗೋಡು: ದಿನದಿಂದ ದಿನಕ್ಕೆ ಬದಲಾಗುತ್ತಿರುವ ಶಿಕ್ಷಣ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನ ಮಾರ್ಗಗಳನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಮನೋಭಾವ ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಬೆಳೆದು ಬರಬೇಕು ಎಂದು ಕರ್ನಾಟಕ ರಾಜ್ಯ ಹಜ್ ಸಚಿವ ರಹೀಂ ಖಾನ್ ಅಭಿಪ್ರಾಯಪಟ್ಟರು.

ಜಾಮಿಅ ಸಅದಿಯ್ಯದಲ್ಲಿ ನಡೆಯುತ್ತಿರುವ ಸಅದಿಯ್ಯ ಸನದುದಾನ, ತಾಜುಲ್ ಉಲಮಾ, ನೂರುಲ್ ಉಲಮಾ ಆಂಡ್ ನೇರ್ಚೆ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲಾನುಸಾರದ ಬದಲಾವಣೆಯನ್ನು ಗಮನಿಸಿಕೊಂಡು ಹೊಸ ಕೋರ್ಸ್‌ಗಳನ್ನು ಆರಂಭಿಸಿದ್ದರಿಂದಲೇ ಐವತ್ತು ವರ್ಷಗಳಲ್ಲಿ ಸಅದಿಯ್ಯ ಅದ್ಭುತ ಪ್ರಗತಿ ಸಾಧಿಸಿದೆ. ಈಗ ಕಾನೂನು ಶಿಕ್ಷಣ ಕ್ಷೇತ್ರಕ್ಕೆ ಕಾಲಿಟ್ಟ ಸಅದಿಯ್ಯ ಆರೋಗ್ಯ ಶಿಕ್ಷಣಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದು ಸಚಿವರು ಕರೆ ನೀಡಿದರು.

ಕರ್ನಾಟಕದ ವಿದ್ಯಾರ್ಥಿಗಳು ಹೆಚ್ಚು ಅವಲಂಭಿಸಿರುವ ಸಅದಿಯ್ಯ ಶಿಕ್ಷಣ ಸಂಸ್ಥೆಯ ಅಭಿವೃದ್ಧಿಗೆ ಸರಕಾರದ ಎಲ್ಲಾ ರೀತಿಯ ಸಹಕಾರವೂ ದೊರೆಯಲಿದೆ ಎಂದು ಸಚಿವ ರಹೀಂ ಖಾನ್ ಭರವಸೆ ನೀಡಿದರು.

ಸಅದಿಯ್ಯ ಅಧ್ಯಕ್ಷ ಸಯ್ಯಿದ್ ಕೆ.ಎಸ್.ಆಟ್ಟಕೊಯ ತಂಳ್ ದಿಕ್ಸೂಚಿ ಭಾಷಣ ಮಾಡಿದರು. ಉಪಾಧ್ಯಕ್ಷ ಮಹಮ್ಮದಲಿ ಸಖಾಫಿ ಅಧ್ಯಕ್ಷತೆ ವಹಿಸಿದರು. ಕರ್ನಾಟಕ ಹಜ್ ಸಮಿತಿಯ ಸದಸ್ಯ ಸಯ್ಯಿದ್ ಅಶ್ರಫ್ ತಂಳ್ ಆದೂರು ದುಆಗೈದರು.

ಶಾಸಕರಾದ ಸಿ.ಎಚ್. ಕುಂಞಂಬು, ಎನ್.ಎ. ನೆಲ್ಲಿಕನ್ನು, ಎ.ಕೆ.ಎಂ. ಅಶ್ರಫ್, ಕಾಸರಗೋಡು ಜಿಪಂ ಉಪಾಧ್ಯಕ್ಷ ಶಾನವಾಸ್ ಪಾದೂರ್, ಡಾ. ಇಫ್ತಿಕಾರ್ ಅಲಿ, ಎನ್.ಕೆ.ಎಂ.ಶಾಫಿ ಸಅದಿ, ಹಕೀಂ ಕುನಿಲ್, ಪಿ.ಕೆ. ಫೈಝಲ್, ಬಿ.ಎಂ. ಜಮಾಲ್, ಕೆ.ಕೆ. ಹುಸೈನ್ ಬಾಖವಿ, ಉಬೈದುಲ್ಲಾಹಿ ಸಅದಿ, ಕೊಳ್ಳಂಬಾಡಿ ಅಬ್ದುಲ್ ಖಾದಿರ್ ಸಅದಿ, ಕೆ.ಎಸ್. ಅನ್ವರ್ ಸಾದಾತ್, ಶಾಫಿ ಹಾಜಿ ಕೀಝೂರು, ಸಿದ್ದೀಕ್ ಮೋಂಟುಗೋಳಿ, ಎಂ.ಎ. ಅಬ್ದುಲ್ ವಹಾಬ್, ಅಬ್ದುಸ್ಸಲಾಂ ದೇಳಿ ಮತ್ತಿತರರು ಉಪಸ್ಥಿತರಿದ್ದರು.

ಪಳ್ಳಂಕೋಡ್ ಅಬ್ದುಲ್ ಖಾದಿರ್ ಮದನಿ ಸ್ವಾಗತಿಸಿದರು. ಅಶ್ರಫ್ ಕರಿಪ್ಪೊಡಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News