ಮಂಗಳೂರು ವಿಮಾನ ನಿಲ್ದಾಣ: ಪ್ರಯಾಣಿಕರ ನಿರ್ವಹಣೆಯಲ್ಲಿ ಹೊಸ ದಾಖಲೆ
Update: 2025-10-20 22:57 IST
ಮಂಗಳೂರು, ಅ.20: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅ.1ರಿಂದ ಪ್ರಯಾಣಿಕರ ದಟ್ಟಣೆ ಜಾಸ್ತಿಯಾಗಿದೆ. ದಿನನಿತ್ಯ ಸರಾಸರಿ 8 ಸಾವಿರ ಪ್ರಯಾಣಿಕರ ನಿರ್ವಹಣೆ ಮಾಡಲಾಗುತ್ತದೆ.
ವಿಜಯ ದಶಮಿಯಂದು (ಅ.1) ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 8,168 ಪ್ರಯಾಣಿ ಕರನ್ನು ನಿರ್ವಹಿಸಲಾಗಿತ್ತು. ಗರಿಷ್ಠ ದಾಖಲೆಯಾಗಿತ್ತು. ಅ.17ರಂದು 8,748 ಪ್ರಯಾಣಿಕರು ಒಂದೇ ದಿನ ಪ್ರಯಾಣಿಸುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. 59 ವಿಮಾನಗಳಲ್ಲಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಲಾಗಿದೆ. ಇದು ಅ.31, 2020ರ ನಂತರ ಹೊಸ ದಾಖಲೆಯಾಗಿದೆ ಎಂದು ಪ್ರಕಟನೆ ತಿಳಿಸಿದೆ.