×
Ad

ಮುಲ್ಕಿ: ಉಪ ನೋಂದಣಾಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಆರೋಪ; ಪ್ರಕರಣ ದಾಖಲು

ದೂರು - ಪ್ರತಿ ದೂರು ದಾಖಲು

Update: 2025-10-21 21:52 IST

ಮುಲ್ಕಿ:  ಉಪ ನೋಂದಣಾಧಿಕಾರಿ ರಾಜೇಶ್ವರಿ ಅವರ ಕರ್ತವ್ಯಕ್ಕೆ ಬೆದರಿಕೆ ಒಡ್ಡಿದ ಬಗ್ಗೆ ರಾಜೇಶ್ವರಿ ನೀಡಿದ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದ್ದು ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅ. 18ರಂದು ವಕೀಲರಾದ ಡೇನಿಯಲ್ ದೇವರಾಜ್ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ರಾಜೇಶ್ವರಿ ನೀಡಿರುವ ದೂರಿನಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು

ಅ. 21ರಂದು ವಕೀಲ ಡೇನಿಯರ್ ದೇವರಾಜ್‌ ಆರೋಪಿಗಳಾದ ರಾಹುಲ್ ಹಳೆಯಂಗಡಿ, ಚೈತ್ರ ಗೋಳಿದಾರ, ಸತೀಶ ಹಳೆಯಂಗಡಿ, ಅಮೇಲ್ ಬಟ್ಟಕೋಡಿ, ಅಬ್ದುಲ್ ರಜಾಕ್ ಮುಲ್ಕಿ, ಸುವೀನ್ ಪಕ್ಷಿಕರೆ, ಶೇಕ್ ಅಕಿಲ್ ಬೆಳ್ತಂಗಡಿ, ತೇಜ್ ಪಾಲ ಹಳೆಯಂಗಡಿ, ಗಣೇಶ್ ಚೆಳಾರ್, ವಿಕೇಶ್ ಹಳೆಯಂಗಡಿ ಎಂಬವರ ಜೊತೆ ಸೇರಿ ರಿಜಿಸ್ಟರ್ ಕಚೇರಿ ಎದುರು ಪ್ರತಿಭಟನೆ ಮಾಡುವ ನೆಪದಲ್ಲಿ ಕಚೇರಿ ಸಿಬ್ಬಂದಿಗಳಿಗೆ ಹಾಗೂ ಸಬ್ ರಿಜಿಸ್ಟರ್ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ವಕೀಲ ಡೇನಿಯಲ್ ದೇವರಾಜ್ ಹಾಗೂ ಮತ್ತಿತರನ್ನು ಮುಲ್ಕಿ ಪೊಲೀಸರು ಬಂಧಿಸಿ ಮೂಡಬಿದ್ರೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ವೈಯುಕ್ತಿಕ ದ್ವೇಷದಿಂದ ರಾಜೇಶ್ವರಿ ಅವರು ಸುಳ್ಳು ದೂರು ನೀಡಿದ್ದಾಗಿ ಡೇನಿಯಲ್ ದೇವರಾಜ್ ಪ್ರತಿದೂರು ನೀಡಿದ್ದಾರೆ.

ಈ ನಡುವೆ ಮುಲ್ಕಿ ಸರಕಾರಿ ನೌಕರರ ಸಂಘದ ವತಿಯಿಂದ ಸರಕಾರಿ ನೌಕರರಿಗೆ ರಕ್ಷಣೆ ನೀಡುವಂತೆ ಹಾಗೂ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News