ಬೆಳ್ತಂಗಡಿ: ಆಟೋ ರಿಕ್ಷಾದಲ್ಲಿ ಅಕ್ರಮ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Update: 2025-10-23 22:26 IST
ಬೆಳ್ತಂಗಡಿ : ಆಟೋ ರಿಕ್ಷಾದಲ್ಲಿ ಅಕ್ರಮವಾಗಿ ಗೋ ಮಾಂಸ ಸಾಗಾಟ ಮಾಡುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿ ಪತ್ತೆ ಹಚ್ಚಿದ್ದು ಅಟೋ ರಿಕ್ಷಾ ಹಾಗೂ ಗೋ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಪೊಲೀಸರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಅ.23 ರಂದು ಮಧ್ಯಾಹ್ನ ಕಿಲ್ಲೂರು ರಸ್ತೆಯಿಂದ ಬರುತ್ತಿದ್ದ ಆಟೋ ರಿಕ್ಷಾವನ್ನು ಲಾಯಿಲ ಜಂಕ್ಷನ್ ನಲ್ಲಿ ತಡೆದು ನಿಲ್ಲಿಸಿ ಪರಿಶೀಲನೆಗೆ ಮುಂದಾದಾಗ ರಿಕ್ಷಾ ಚಾಲಕ ಲಾಯಿಲ ನಿವಾಸಿ ಹಕೀಂ (27) ಪೊಲೀಸರನ್ನು ನೋಡಿ ತಪ್ಪಿಸಿಕೊಂಡು ಓಡಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಪರಿಶೀಲನೆ ವೇಳೆ ಆಟೋ ರಿಕ್ಷಾದೊಳಗೆ 85 ಕೆ.ಜಿ ಗೋಮಾಂಸ ಪತ್ತೆಯಾಗಿದ್ದು, ಆಟೋದ ಮೌಲ್ಯ 2,50,000 ಲಕ್ಷ ರೂ. ಮತ್ತು ಗೋಮಾಂಸ ವಶಪಡಿಸಿಕೊಂಡು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಕಲಂ 12 ಕರ್ನಾಟಕ ಗೋವಧೆ ಹಾಗೂ ಜಾನುವಾರು ಸಂರಕ್ಷಣಾ ಅಧಿನಿಯಮ 2020 ರಂತೆ ಪ್ರಕರಣ ದಾಖಲಾಗಿದೆ.