ಪ್ರಚೋದನಕಾರಿ ಪೋಸ್ಟ್: ಇನ್‌ಸ್ಟಾಗ್ರಾಮ್ ಖಾತೆದಾರರ ವಿರುದ್ಧ ಪ್ರಕರಣ ದಾಖಲು
ಬಜ್ಪೆ: ಸಾಮಾಜಿಕ ಜಾಲತಾಣದಲ್ಲಿ ಸಮುದಾಯಗಳ ನಡುವೆ ದ್ವೇಷ ಹುಟ್ಟುವಂತೆ ಪ್ರಚೋದನೆ ನೀಡಿದ ಇನ್ ಸ್ಟಾಗ್ರಾಮ್ ಖಾತೆದಾರರ ವಿರುದ್ಧ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
“Suhas_bhai_93_fc” ಎಂಬ ಇನ್ ಸ್ಟಾಗ್ರಾಮ್ ಖಾತೆಯಲ್ಲಿ “ಪ್ರತಿಕರ ಅಪಾರದವಲ್ಲ THE REAL MAN OF HINDU ನಿನ್ನ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ ಅಣ್ಣ, ಆದಷ್ಟು ಬೇಗ ಉತ್ತರ ಕೊಡ್ತಿವಿ” ಎಂಬುದಾಗಿ ಇತ್ತಿಚಿಗೆ ಹತ್ಯೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಭಾವಚಿತ್ರವನ್ನು ಹಾಕಿ ಪ್ರಸಾರ ಮಾಡಲಾಗಿತ್ತು.
ಸ್ಟೇಟಸ್ ನಲ್ಲಿ ಸ್ಟೋರಿಸ್ ಹಾಕಿ ವೈರಲ್ ಮಾಡಿ ಉದ್ರೇಕಕಾರಿಯಾಗಿ, ದ್ವೇಷದ ಭಾವನೆ ಹುಟ್ಟು ಹಾಕಿ ಅಪರಾಧ ಕೃತ್ಯವೆಸಗುವಂತೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿ, ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ದ್ವೇಷ ಭಾವನೆ ಹುಟ್ಟುವಂತೆ ಪ್ರಚೋದನೆ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಮಾಡಲಾಗಿತ್ತು.
ಈ ಹಿನ್ನೆಲೆಯಲ್ಲಿ ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.