ಕಡಂಬು ಜಮಾಅತ್ ‘ಗಲ್ಫ್ ಸಮಿತಿ’ ಅಸ್ತಿತ್ವಕ್ಕೆ
Update: 2025-10-27 21:39 IST
ವಿಟ್ಲ: ಕಡಂಬು ಜಮಾಅತ್ ಆಡಳಿತ ಸಮಿತಿಯ ಅಧೀನದಲ್ಲಿ ನೂತನ ಗಲ್ಫ್ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ಇತ್ತೀಚೆಗೆ ವರ್ಚುವಲ್ ಸಭೆಯ ಮೂಲಕ ಸಮಿತಿಯ 2025/26ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಗೌರವಾಧ್ಯಕ್ಷರಾಗಿ ಅಶ್ರಫ್ ಉಸ್ಮಾನ್ P , ಅಧ್ಯಕ್ಷರಾಗಿ ಅಶ್ರಫ್ VS, ಉಪಾಧ್ಯಕ್ಷರಾಗಿ ಉಮ್ಮರ್ ಫಾರೂಕ್ ಪಿ, ಕೋಶಾಧಿಕಾರಿಯಾಗಿ ಅಬ್ದುಲ್ ಕುಂಞಿ ಬೆದ್ರಕಾಡು, ಕಾರ್ಯದರ್ಶಿಗಳಾಗಿ ಇಬ್ರಾಹಿಂ CH, ಉಬೈದ್ VS, ನವಾಝ್ ಕಡಂಬು, ಇಬ್ಬ ಕಡಂಬು ಆಯ್ಕೆಗೊಂಡರು.
ಅಶ್ರಫ್ KM, ಶಾಫಿ VS, ಫಾರೂಕ್ KM ಕಾರ್ಯಕಾರಿ ಸಮಿತಿಯ ಸದಸ್ಯರಾದರೆ, ಅಲಿ AB ಹಾಗೂ ಇಕ್ಬಾಲ್ P ಸಮಿತಿಯ ಸಂಯೋಜಕರಾಗಿ ಆಯ್ಕೆಯಾದರು.