×
Ad

ಕ್ರೀಡೆಯಲ್ಲಿ ಉತ್ತಮ ಸಾಧನೆಯ ಗುರಿ ಮುಖ್ಯ : ಶಾಸಕ ಉಮಾನಾಥ ಕೋಟ್ಯಾನ್

Update: 2025-10-28 19:52 IST

ಮೂಡುಬಿದಿರೆ: ಸ್ಪರ್ಧೆಗಳಲ್ಲಿ ಸೋಲು ಗೆಲುವು ಸಾಮಾನ್ಯ. ಸ್ಪಧೆ೯ ಗೆಲುವಿಗಾಗಿ ಮಾತ್ರವಲ್ಲ, ತಪ್ಪನ್ನು ತಿದ್ದು ಕೊಳ್ಳಲೂ ಅವಕಾಶ. ಸೋತರೂ ಮುಂದಿನ ಸ್ಪರ್ಧೆಯಲ್ಲಿ ಹೇಗೆ ಗೆಲುವು ಸಾಧಿಸಬೇಕು ಎನ್ನುವುದನ್ನು ಅರಿತು, ಪರಿಶ್ರಮ, ಹಠದಿಂದ ಮುಂದಿನ ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಮೂಡುಬಿದಿರೆ ಅಂತಾರಾಷ್ಟ್ರೀಯ ಕ್ರೀಡಾಪಟು ಗಳನ್ನು ನೀಡಿದ ತಾಲೂಕು. ಇಂದು ಭಾಗವಹಿಸುವ ವಿದ್ಯಾರ್ಥಿಗಳು ಮುಂದೆ ಕ್ರೀಡಾಕೂಟಗಳಲ್ಲಿ‌ ಉತ್ತಮ ಸಾಧನೆ ಮಾಡುವ ಗುರಿ ಹೊಂದಿರಬೇಕು ಎಂದು ಶಾಸಕ ಉಮಾನಾಥ ಎ. ಕೋಟ್ಯಾನ್ ಹೇಳಿದರು.

ಅವರು ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮೂಡುಬಿದಿರೆ, ಹಾಗೂ ಸರಕಾರಿ ಪ್ರೌಢ ಶಾಲೆ, ಪ್ರಾಂತ್ಯ, ಮೂಡುಬಿದಿರೆ ತಾಲೂಕು ದ.ಕ. ಸಂಯುಕ್ತ ಆಶ್ರಯದಲ್ಲಿ ಮೂಡುಬಿದಿರೆ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಮೂಡುಬಿದಿರೆ ಸ್ವರಾಜ್ಯ ಮೈದಾನದಲ್ಲಿ ಮಂಗಳವಾರ ಉದ್ಘಾಟಿಸಿ ಮಾತನಾಡಿದರು.

ಪುರಸಭೆ ಅಧ್ಯಕ್ಷೆ ಜಯಶ್ರೀ ಕೇಶವ್, ಉಪಾಧ್ಯಕ್ಷ ನಾಗರಾಜ ಪೂಜಾರಿ, ಸದಸ್ಯ ಇಕ್ಬಾಲ್ ಕರೀಂ, ಎಂಸಿಎಸ್ ಬ್ಯಾಂಕ್ ನ ಅಧ್ಯಕ್ಷ ಬಾಹುಬಲಿ ಪ್ರಸಾದ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನವೀನ್ ಆರ್ .ಪುತ್ರನ್, ಎಸ್.ಡಿ.ಎಂ.ಸಿ ಕಾರ್ಯಾಧ್ಯಕ್ಷ ಜಿತೇಶ್ ಕುಮಾರ್, ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷೆ ಡಾ.ರಾಜಶ್ರೀ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ದೊರೆಸ್ವಾಮಿ ಕೆ.ಎನ್., ಸಹ ಶಿಕ್ಷಕರ ಸಂಘದ ಅಧ್ಯಕ್ಷ ರಾಮಕೃಷ್ಣ ಶಿರೂರು, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುಧಾಕರ್ ಸಾಲ್ಯಾನ್, ದೈಹಿಕ‌ ಶಿಕ್ಷಣ ಶಿಕ್ಷಕರ‌ ಸಂಘದ ಅಧ್ಯಕ್ಷ ಶಿವಾನಂದ ಕಾಯ್ಕಿಣಿ, ಅನುದಾನಿತ ಶಿಕ್ಷಕರ‌‌ ಸಂಘದ ಅಧ್ಯಕ್ಷ ಶಶಿಕಾಂತ್ ವೈ ಉಪಸ್ಥಿತರಿದ್ದರು.

ಪ್ರಾಂತ್ಯ ಶಾಲೆಯ ಮುಖ್ಯ ಶಿಕ್ಷಕ ರಾಮಚಂದ್ರ ನಾಯಕ್ ಸ್ವಾಗತಿಸಿದರು. ದೈಹಿಕ ಶಿಕ್ಷಣ‌ ಶಿಕ್ಷಕ ನವೀನ್ ಅಂಬೂರಿ ಕಾಯ೯ಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News