ಪಡ್ನೂರು ಗುರುಂಪುನಾರ್ ಜನ್ನತುಲ್ ಉಲೂಂ ಇಸ್ಲಾಮಿಕ್ ಕಲ್ಚರರ್ ಸೆಂಟರ್, ಅರೆಬೀಕ್ ಶಾಲೆಯ ಮಹಾಸಭೆ
Update: 2025-10-28 21:46 IST
ಪುತ್ತೂರು: ಪಡ್ನೂರು ಗುರುಂಪುನಾರ್ ಜನ್ನತುಲ್ ಉಲೂಂ ಇಸ್ಲಾಮಿಕ್ ಕಲ್ಚರರ್ ಸೆಂಟರ್ ಮತ್ತು ಅರೆಬೀಕ್ ಶಾಲೆ ಇದರ ಮಹಾಸಭೆಯು ಇತ್ತೀಚಿಗೆ ಅರೇಬಿಕ್ ಶಾಲಾ ಸಭಾಂಗಣದಲ್ಲಿ ನಡೆಯಿತು. ಬಳಿಕ ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಕುಂಞ ಅಹ್‌ಮದ್ ಹಾರಾಡಿ, ಉಪಾಧ್ಯಕ್ಷರಾಗಿ ಹನೀಫ್ ಸಿಬಾರ, ಇಬ್ರಾಹೀಂ ಅಕ್ಕರೆ, ಪ್ರಧಾನ ಕಾರ್ಯದರ್ಶಿಯಾಗಿ ಸಮೀರ್ ಅಕ್ಕರೆ, ಕೋಶಾಧಿಕಾರಿಯಾಗಿ ಸಿರಾಜ್ ಅಕ್ಕರೆ ಅವರನ್ನು ಆಯ್ಕೆ ಮಾಡಲಾಯಿತು.