ಚಾಬು ಚಾರಿಟೇಬಲ್ ಟ್ರಸ್ಟ್ ಮಹಾಸಭೆ: ಪದಾಧಿಕಾರಿಗಳ ಆಯ್ಕೆ
ಸುರತ್ಕಲ್: ಚಾಬು ಚಾರಿಟೇಬಲ್ ಟ್ರಸ್ಟ್ (ರಿ) ಇದರ 2025–26ನೇ ಸಾಲಿನ ಮಹಾಸಭೆಯು ಹಾಜಿ ಎಂ.ಸಿ. ಅಬ್ದುಲ್ ರಹಿಮಾನ್ ಅಧ್ಯಕ್ಷತೆಯಲ್ಲಿ ರವಿವಾರ ಕುದ್ರೋಳಿಯ ಚಾಬೂಸ್ ಗಾರ್ಡನ್ ನಲ್ಲಿ ನಡೆಯಿತು.
ಈ ಸಂದರ್ಭ ಟ್ರಸ್ಟ್ ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಗೌರವಾಧ್ಯಕ್ಷರಾಗಿ ಎಂ.ಎ. ಹಸನಬ್ಬ ಮಂಗಳಪೇಟೆ ಸರ್ವಾನುಮತದಿಂದ ಆಯ್ಕೆಯಾದರು.
ಅಧ್ಯಕ್ಷರಾಗಿ ಹಾಜಿ ಎಂ.ಸಿ.ಶೇಕಬ್ಬ, ಉಪಾಧ್ಯಕ್ಷರಾಗಿ ಹಾಜಿ ಎಂ.ಸಿ. ಅಬ್ದುಲ್ ರಹಿಮಾನ್, ರಫೀಕ್ ಕೃಷ್ಣಾಪುರ ಮತ್ತು ಅಬ್ದುಲ್ ನಾಸಿರ್ ಕುದ್ರೊಳಿ ಆಯ್ಕೆಯಾದರು.
ಸಲಹೆಗಾರರಾಗಿ ಹಾಜಿ ಯೂಸುಫ್ ಪಿ.ಜೆ. ಪಾಣೆಮಂಗಳೂರು, ಇಸ್ಮಾಯೀಲ್ ಅಹ್ಮದ್ ಬಿಜೈ, ಹಾಜಿ ಹುಸೈನ್ ಪಿ.ಎಂ. ಪಡುಬಿದ್ರೆ ಮತ್ತು ಮುಹಮ್ಮದ್ ರಫೀಕ್ ಬಿ.ಸಿ.ರೋಡ್ ಆಯ್ಕೆಯಾದರು.
ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ರಿಯಾಝ್ ಬಿಜೈ ಮತ್ತು ಜೊತೆ ಕಾರ್ಯದರ್ಶಿಯಾಗಿ ಎಂ. ಸರ್ಫರಾಝ್ ನವಾಝ್, ಲೆಕ್ಕ ಪರಿಶೋಧಕರಾಗಿ ಝುಬೈರ್ ಬಿಜೈ ಮತ್ತು ಅಬ್ದುಲ್ ಖಾದರ್ ಯಹಿಯ್ಯಾ ಕೃಷ್ಣಾಪುರ ಆಯ್ಕೆಯಾದರು.
ಕಾರ್ಯಕಾರಿ ಸದಸ್ಯರಾಗಿ ಅಬ್ದುಲ್ ಖಾದರ್ ಕುದ್ರೊಳಿ, ಅಬ್ದುಲ್ ಹಮೀದ್ ಕೃಷ್ಣಾಪುರ, ಯಾಸೀರ್ ಅರಾಫತ್ ಕುದ್ರೊಳಿ, ಸಾದಿಕ್ ಬಿಜೈ, ಮುನೀರ್ ಕೃಷ್ಣಾಪುರ, ಮುಹಮ್ಮದ್ ಇದ್ರೀಸ್ ಪಾಣೆಮಂಗಳೂರು, ಶಾರೀಕ್ ಬಿ.ಸಿ.ರೋಡ್ ಮತ್ತು ಹಬೀಬುರ್ರಹ್ಮಾನ್ ಸೂರಲ್ಪಾಡಿ ಆಯ್ಕೆಯಾದರು.