ಮಂಗಳೂರು ಮನಪಾ ವ್ಯಾಪ್ತಿಯ ಸಮಸ್ಯೆಗಳ ಬಗ್ಗೆ ಐವನ್ ಡಿಸೋಜಾ ನೇತೃತ್ವದಲ್ಲಿ ಸಂವಾದ ಕಾರ್ಯಕ್ರಮ
ಮಂಗಳೂರು, ಡಿ.6: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಂವಾದ ಕಾರ್ಯಕ್ರಮವು ಶುಕ್ರವಾರ ಮನಪಾ ಸಭಾಂಗಣದಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ನೇತೃತ್ವದಲ್ಲಿ ನಡೆಯಿತು.
ನಗರ ಪಾಲಿಕೆ ಒಳಚರಂಡಿ ಅವ್ಯವಸ್ಥೆ, ಕುಡಿಯುವ ನೀರು, ಜನನ-ಮರಣ ಪತ್ರ, ಇ-ಖಾತ, ರಸ್ತೆ ಕಾಮಗಾರಿ, ಮೂಲಭೂತ ಸೌಕರ್ಯಗಳ ಬಗ್ಗೆ ಮನಪಾ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭ ಮಾತನಾಡಿದ ಐವನ್ ಡಿಸೋಜ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಮುಖವಾಗಿ ಒಳಚರಂಡಿ ಸಮಸ್ಯೆ, ರಸ್ತೆ, ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಹೆಚ್ಚು ಗಮನ ಹರಿಸಬೇಕು. ಅನುದಾನದ ಕೊರತೆಯಿದ್ದಲ್ಲಿ ಸರಕಾರದೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.
ಈ ಸಂದರ್ಭ ಪ್ರಮುಖರಾದ ಭಾಸ್ಕರ್ ಮೊಯಿಲಿ, ಶಶಿಧರ್ ಹೆಗ್ಡೆ, ಅಶ್ರಫ್ ಬಜಾಲ್, ಅಪ್ಪಿ, ನಾಗೇಂದ್ರ ಕುಮಾರ್ ಜೆ., ನವೀನ್ ಡಿಸೋಜ, ಭಾಸ್ಕರ ರಾವ್, ಝೀನತ್ ಶಂಶುದ್ದೀನ್, ಸತೀಶ್ ಪೆಂಗಲ್, ಕಿಶೋರ್ ಕುಮಾರ್ ಶೆಟ್ಟಿ, ಚೇತನ್ ಕುಮಾರ್, ಹೇಮಂತ್ ಗರೋಡಿ, ಸೇಸಮ್ಮಕ್ಕ, ಪದ್ಮನಾಭ ಪಣಿಕ್ಕರ್, ಪ್ರಕಾಶ್ ಸಾಲ್ಯಾನ್, ಜೇಮ್ಸ್ ಪ್ರವೀಣ್, ಸ್ಟ್ಯಾನಿ ಅಳ್ವಾರಿಸ್, ಸ್ಟ್ಯಾನಿ ಲೋಬೋ, ಸಮರ್ಥ ಭಟ್, ಹಬೀಬುಲ್ಲ, ಅನಿಲ್ ಲೋಬೋ ಜೆಪ್ಪು, ಅಲ್ಟಿನ್ ಡಿಕುನ್ಹ ಸಲಹೆ, ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಇಂಜಿನಿಯರ್ ನರೇಶ್ ಶೆಣೈ ಸಮಸ್ಯೆಗಳಿಗೆ ಆದ್ಯತೆಯ ಮೇರೆಗೆ ಸ್ಪಂದಿಸುವುದಾಗಿ ತಿಳಿಸಿದರು.