ಬೆಳುವಾಯಿ ಗ್ರಾ.ಪಂ. ಸದಸ್ಯ ಫಣಿರಾಜ್ ಬಲಿಪ ನಿಧನ
Update: 2025-10-31 20:22 IST
ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯತ್ ಸದಸ್ಯ ಬೆಳುವಾಯಿ ಕುಕ್ಕುಡೇಲು ನಿವಾಸಿ ಫಣಿರಾಜ್ ಬಲಿಪ ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಶುಕ್ರವಾರ ನಿಧನ ಹೊಂದಿದರು.
ನಾಲ್ಕು ಬಾರಿ ಗ್ರಾ. ಪಂ. ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಜನಸ್ನೇಹಿಯಾಗಿ ಸೇವೆ ಮಾಡುತ್ತಿದ್ದರು. ಟೆಲಿಫೋನ್ ಬೀಡಿ ಕಂಪೆನಿಯ ನೌಕರರಾಗಿದ್ದರು ಮತ್ತು ಕಾಂಗ್ರೆಸ್ ಪಕ್ಷದ ಕಟ್ಟಾಳು ಎನಿಸಿದ್ದರು.
ಮೃತರು ಪತ್ನಿ ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಆಗಲಿದ್ದಾರೆ. ಮಾಜಿ ಸಚಿವ ಕೆ ಅಭಯಚಂದ್ರ, ಸೇರಿ ದಂತೆ ಪಂಚಾಯತ್ ಸದಸ್ಯರು ಹಾಗೂ ಊರವರು ಮೃತರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.