ಇಂದು ಎಸ್.ವೈ.ಎಸ್. ಬೆಳ್ತಂಗಡಿ ಝೋನ್ ಕೌನ್ಸಿಲರ್ಸ್ ಕಾಂಕ್ಲೇವ್
Update: 2025-11-02 11:32 IST
ಬೆಳ್ತಂಗಡಿ: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ(ಎಸ್.ವೈ.ಎಸ್.) ಬೆಳ್ತಂಗಡಿ ಝೋನ್ ವ್ಯಾಪ್ತಿಯ ಸರ್ಕಲುಗಳ ಎಲ್ಲಾ ಕೌನ್ಸಿಲರ್ ಗಳನ್ನು ಸೇರಿಸಿ ನಡೆಯುವ 'ಕೌನ್ಸಿಲರ್ಸ್ ಕಾಂಕ್ಲೇವ್' ನ.2ರಂದು ಅಪರಾಹ್ನ 3ಕ್ಕೆ ಕಾಜೂರಿನಲ್ಲಿ ದರ್ಗಾ ಝಿಯಾರತ್ ನೊಂದಿಗೆ ಆರಂಭಗೊಳ್ಳಲಿದೆ.
ಎಸ್.ವೈ.ಎಸ್. ಬೆಳ್ತಂಗಡಿ ಝೋನ್ ಅಧ್ಯಕ್ಷ ಅಬ್ದುಲ್ ರಹ್ಮಾನ್ ಸಖಾಫಿ ಆಲಂದಿಲ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷ ಅಶ್ರಫ್ ಸಖಾಫಿ ಮಾಡವು, ಉಪಾಧ್ಯಕ್ಷ ಉಸ್ಮಾನ್ ಸೋಕಿಲ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುವರು.
ಬೆಳ್ತಂಗಡಿ ಝೋನ್ ವ್ಯಾಪ್ತಿಯ ಏಳು ಸರ್ಕಲ್ ಗಳ ಸುಮಾರು ನೂರರಷ್ಟು ಕೌನ್ಸಿಲರ್ ಗಳು ಭಾಗವಹಿಸಲಿದ್ದಾರೆ ಎಂದು ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಪ್ರಧಾನ ಕಾರ್ಯದರ್ಶಿ ಸಲೀಂ ಕನ್ಯಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.