×
Ad

ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ: ಅಧ್ಯಕ್ಷರಾಗಿ ಮೇಘರಾಜ್ ಜೈನ್ ಅವಿರೋಧವಾಗಿ ಆಯ್ಕೆ

Update: 2026-01-28 22:16 IST

 ಮೇಘರಾಜ್, ರತ್ನಾಕರ ಶೆಟ್ಟಿ

ಮಂಗಳೂರು , ಜ.28: ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿ ಇದರ ನೂತನ ಅಧ್ಯಕ್ಷರಾಗಿ ಮೇಘರಾಜ್ ಜೈನ್ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

ಮೇಘರಾಜ್ ಜೈನ್ ಅವರು ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಇದರ ಮೆನೇಜಿಂಗ್ ಟ್ರಸ್ಟಿಯೂ ಆಗಿರುತ್ತಾರೆ. ಉಪಾಧ್ಯಕ್ಷರಾಗಿ ಬಜ್ಪೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕರಾದ ರತ್ನಾಕರ ಶೆಟ್ಟಿ ಇವರು ಆಯ್ಕೆಯಾಗಿದ್ದಾರೆ.

ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಸಭಾಂಗಣದಲ್ಲಿ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣಾ ಪ್ರಕ್ರಿಯೆಯಲ್ಲಿ ಇವರು ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡರು.

ಚುನಾವಣೆಯನ್ನು ದಕ್ಷಿಣ ಕನ್ನಡ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೆೇರಿಯ ಅಧೀಕ್ಷಕರಾದ ಬಿ.ನಾಗೇಂದ್ರ ನಡೆಸಿಕೊಟ್ಟರು.

ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರ ಸಂಘ ನಿ., ಇದರ ಮುಂದಿನ ಐದು ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ 16 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಎಂ.ಎನ್.ರಾಜೇಂದ್ರ ಕುಮಾರ್, ವಿನಯ ಕುಮಾರ್ ಸೂರಿಂಜೆ , ರತ್ನಾಕರ ಶೆಟ್ಟಿ , ರಾಘವ ಶೆಟ್ಟಿ , ಮೋನಪ್ಪ ಶೆಟ್ಟಿ , ಸುನೀಲ್ ಕುಮಾರ್ , ನಜೀರ್ ಹುಸೈನ್ , ಎಂ. ಮಹೇಶ್ ಹೆಗ್ಡೆ , ಎಸ್.ರಾಜು ಪೂಜಾರಿ , ಎಂ. ವಾದಿರಾಜ ಶೆಟ್ಟಿ , ಮೇಘರಾಜ್ ಜೈನ್ , ಹಿಂದುಳಿದ ‘ಅ’ ವರ್ಗದಿಂದ ಭಾಸ್ಕರ್ ಎಸ್.ಕೋಟ್ಯಾನ್ , ಪರಿಶಿಷ್ಟ ಜಾತಿ ವರ್ಗದಿಂದ ಜಗದೀಶ್ಚಂದ್ರ ಎಸ್, ಹಿಂದುಳಿದ ‘ ಬ’ ವರ್ಗದಿಂದ ಗುಲ್ಜರ್ ಹುಸೈನ್ , ಮಹಿಳಾ ಮೀಸಲು ಕ್ಷೇತ್ರದಿಂದ ಸಾವಿತ್ರಿ ರೈ , ಪೂರ್ಣಿಮಾ ಶೆಟ್ಟಿ, ಅವಿರೋಧವಾಗಿ ಆಯ್ಕೆಗೊಂಡರು.


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News