×
Ad

ತುಂಬೆ: ಪ್ರಸಕ್ತ ವರ್ಷ ನಿವೃತ್ತರಾಗುವವರಿಗೆ ಅಭಿನಂದನಾ ಸಮಾರಂಭ

Update: 2026-01-28 20:43 IST

ಬಂಟ್ವಾಳ : ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಬೇಕಾದ್ದು ಅಗತ್ಯ. ಅವರ ಅರ್ಪಣಾ ಮನೋ ಭಾವ, ಶಿಸ್ತುಬದ್ಧ ಸೇವೆ, ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಏಳಿಗೆಗಾಗಿ ವಹಿಸಿದ ಪಾತ್ರ ಮತ್ತು ಕೊಡುಗೆಗಳನ್ನು ಸದಾ ಸ್ಮರಿಸಬೇಕು. ಈ ನಿಟ್ಟಿನಲ್ಲಿ ತುಂಬೆ ವಿದ್ಯಾ ಸಂಸ್ಥೆಗಳಲ್ಲಿ ಶಕ್ತಿ ಮೀರಿ ಬೋಧನಾ ಕರ್ತವ್ಯವನ್ನು ಅಹರ್ನಿಶಿ ಯಾಗಿ ನಿಭಾಯಿಸಿದ ಬೋಧಕ-ಬೋಧಕಿಯರನ್ನು ಸಂಸ್ಥೆ ಸದಾ ಸ್ಮರಿಸುತ್ತದೆ ಎಂದು ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ಇದರ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಹೇಳಿದರು.

ಅವರು ತುಂಬೆ ಬಿ.ಎ.ವಿದ್ಯಾ ಸಂಸ್ಥೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸುದೀರ್ಘ ಅವಧಿಯ ಸೇವೆ ಸಲ್ಲಿಸಿ ವಯೋ ಸಹಜ ನಿವೃತ್ತಿ ಹೊಂದುತ್ತಿರುವ ನಾಲ್ಕು ಮಂದಿ ಬೋಧಕ-ಬೋಧಕಿಯರ ವಿದಾಯ ಕೂಟದಲ್ಲಿ ಅವರನ್ನು ಸನ್ಮಾನಿಸಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತುಂಬೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಕೆ.ಎನ್.ಗಂಗಾಧರ ಆಳ್ವ ಮಾತನಾಡಿ ತುಂಬೆಯಂತಹ ವಿದ್ಯಾ ಸಂಸ್ಥೆಯಲ್ಲಿ ಕೆಲಸ ಮಾಡುವುದೇ ಒಂದು ಒಳ್ಳೆಯ ಅನುಭವ. ಈ ವರ್ಷ ನಿವೃತ್ತರಾಗುವವರೂ ನಿಷ್ಕಲ್ಮಷ ಮನೋಭಾವದಿಂದ ಸೇವೆ ಸಲ್ಲಿಸಿ, ತಮ್ಮ ಅಪಾರ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯೆರೆದು ವಿದ್ಯಾರ್ಥಿಗಳ ಮತ್ತು ಅವರ ಪೋಷಕರ ಹಾಗೂ ಆಡಳಿತ ಮಂಡಳಿಯ ಪ್ರೀತಿ, ಪ್ರಶಂಸೆ ಮತ್ತು ಸಹೋದ್ಯೋಗಿಗಳೆಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದರು.

ಉಪನ್ಯಾಸಕರಾದ ದಿನೇಶ ಶೆಟ್ಟಿ, ಅಬ್ದುಲ್ ರಹಮಾನ್ ಡಿ.ಬಿ., ಕವಿತಾ, ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ, ಶಿಕ್ಷಕಿಯರಾದ ಪ್ರತಿಮಾ, ರೇಷ್ಮಾ ಶೆಟ್ಟಿ, ಸೌಮ್ಯಾ ಹಾಗೂ ಲವೀನಾ ವಿದಾಯ ಹೊಂದಲಿರುವ ನಾಲ್ಕು ಮಂದಿಗಳ ಗುಣಗಾದೊಂದಿಗೆ ಅಭಿನಂದಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿದ ನಿವೃತ್ತಿ ಹೊಂದಲಿರುವ ತುಂಬೆ ಪ.ಪೂ.ಕಾಲೇಜಿನ ಇತಿಹಾಸ ಉಪನ್ಯಾಸಕಿ ಶರ್ಮಿಳಾ, ತುಂಬೆ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಮಲ್ಲಿಕಾ ಶೆಟ್ಟಿ, ತುಂಬೆ ಹೈಸ್ಕೂಲ್ ನ ಹಿಂದಿ ಅಧ್ಯಾಪಕ ರಘುಪತಿ ಭಟ್, ಎಲ್ ಕೆ ಜಿ ಶಿಕ್ಷಕಿ ಜಾನೆಟ್ ಪಸನ್ನ ಸನ್ಮಾನ ಸ್ವೀಕರಿಸಿ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಮುಹಿಯುದ್ದೀನ್ ಎಜುಕೇಶನಲ್ ಟ್ರಸ್ಟ್ ನ ಟ್ರಸ್ಟೀ ಬಿ.ಎಂ.ಅಶ್ರಫ್, ಪಿ.ಟಿ.ಎ ಅಧ್ಯಕ್ಷ ನಿಸಾರ್ ಅಹಮದ್ ವಳವೂರು, ಉಪಾಧ್ಯಕ್ಷೆ ಮೋಹಿನಿ ಸುವರ್ಣ, ಕಾರ್ಯಕಾರಿ ಸಮಿತಿಯ ಮ್ಯಾಕ್ಸಿಂ ಕುವೆಲ್ಲೋ, ಶರೀಫ್, ಅಬ್ದುಲ್ ಗಫೂರ್, ತುಂಬೆ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಕೆದಿಲ, ನಿವೃತ್ತ ಕನ್ನಡ ಪಂಡಿತ ರಾಜ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶೇಖರ್ ಬಿ ತುಂಬೆ ಪ್ರಾರ್ಥನೆ ಗೈದರು. ಕಚೇರಿ ಅಧೀಕ್ಷಕ ಅಬ್ದುಲ್ ಕಬೀರ್ ಪ್ರಸ್ತಾವಿಸಿ ತುಂಬೆ ಕಾಲೇಜಿನ ಪ್ರಾಂಶುಪಾಲ ವಿ.ಎಸ್.ಭಟ್ ಸ್ವಾಗತಿಸಿದರು. ತುಂಬೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ವಿದ್ಯಾ ವಂದಿಸಿದರು. ಕಚೇರಿ ಸಹಾಯಕ ಹಾಗು ಕಲಾವಿದ ಯೋಗೀಶ್ ಬಿ ತುಂಬೆ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News