×
Ad

ಖ್ಯಾತ ಸಂಖ್ಯಾಶಾಸ್ತ್ರಜ್ಞ ಪ್ರೊ. ಸುಬ್ಬ ಪಕ್ಕಳ ನಿಧನ

Update: 2026-01-28 19:33 IST

ಕೊಣಾಜೆ: ಖ್ಯಾತ ಸಂಖ್ಯಾಶಾಸ್ತ್ರಜ್ಞ, ನಿವೃತ್ತ ಪ್ರಾಧ್ಯಾಪಕ ಪ್ರೊ. ಸುಬ್ಬ ಪಕ್ಕಳ ಪಂಜಾಳ(80) ಅವರು ಬುಧವಾರ ಮುಂಜಾನೆ ನಿಧನರಾದರು.

ಇವರ ಕುಟುಂಬದ ಮನೆ ತಲಪಾಡಿಯಾಗಿದ್ದು ಕಳೆದ ಹಲವು ವರ್ಷಗಳಿಂದ ಕೊಣಾಜೆಯ ಗ್ರೀನ್ ವ್ಯೂ ಪರಿಸರದಲ್ಲಿ ವಾಸವಾಗಿದ್ದರು. ಪತ್ನಿ, ಇಬ್ಬರು ಹೆಣ್ಣು ಮಕ್ಕಳು, ಅಳಿಯಂದಿರು, ಮೊಮ್ಮಕ್ಕಳು ಹಾಗೂ ಅನೇಕ ಬಂಧು ಮಿತ್ರರನ್ನು ಅವರು ಅಗಲಿದ್ದಾರೆ.

1976 ರಿಂದ 1981 ವರೆಗೆ ಮಂಗಳೂರಿನ ಸರಕಾರಿ ಕಾಲೇಜು (ಈಗಿನ ವಿ. ವಿ ಕಾಲೇಜು) ಅಲ್ಲಿ ಉಪಾನ್ಯಾಸಕ ರಾಗಿ ನಂತರ ಬೆಂಗಳೂರಿನ ಸರಕಾರಿ ಕಾಲೇಜಿನಲ್ಲಿ ಮತ್ತು ಪ್ರತಿಷ್ಠಿತ ಮಹಾರಾಣಿ ಕಾಲೇಜಿನಲ್ಲಿ ಸೇವೆಸಲ್ಲಿಸಿ ಬಳಿಕ ದಿನಗಳಲ್ಲಿ ಹೆಬ್ರಿಯ ಸರಕಾರಿ ಕಾಲೇಜಿನಲ್ಲಿ ಪ್ರಿನ್ಸಿಪಾಲ್ ಆಗಿ, ಕೊನೆಗೆ ಬೆಂಗಳೂರಿನ ಪದವಿಕಾಲೇಜು ಪ್ರಿನ್ಸಿಪಾಲ್ ಆಗಿ ನಿವೃತ್ತಿ ಹೊಂದಿದ್ದರು. ಲೇಖಕರೂ ಕವಿಗಳು ಅದ ಇವರು ತಮ್ಮ ನಿವೃತ್ತಿ ನಂತರ ಕೂಡ ಹಲವು ಶಾಲಾ ಕಾಲೇಜು ಸಂಘ ಸಂಸ್ಥೆಗಳಿಗೆ ತೆರಲಿ ಸಂಖ್ಯಾ ಶಾಸ್ತ್ರದ ಬಗ್ಗೆ ಉಚಿತ ಶಿಕ್ಷಣ ನೀಡುತಿದ್ದರು.

ಕಾಲೇಜಿನಲ್ಲಿ ರಾಂಕ್ ವಿದ್ಯಾರ್ಥಿಯಾಗಿದ್ದ ಅವರು ತಲಪಾಡಿ ದೇವಿಪುರ ಪರಿಸರದಲ್ಲಿ ವಯಸ್ಕರ ಶಿಕ್ಷಣ ಸಂಸ್ಥೆ ತೆರೆದು ಅನೇಕರಿಗೆ ವಿದ್ಯಾರ್ಜನೆ ಮಾಡುತಿದ್ದರು.

ಕಲೆ, ಶಿಕ್ಷಣ,‌ಸಮಾಜ ಸೇವೆಯ ಜೊತೆಗೆ ಪರಿಸರಪರ ಕಾಳಜಿಯನ್ನು ಬೆಳೆಸಿಕೊಂಡಿದ್ದ ಪ್ರೊ.ಸುಬ್ಬ ಪಕ್ಕಳ ಅವರು "ನಾನು ಸತ್ತ ಮೇಲೆ ಶರೀರ ಬೂದಿಯಾಗಿ ಹೋಗುವುದಕ್ಕಿಂತ ತನ್ನ ಶರೀರದಿಂದ ಇನ್ನೊಬ್ಬರಿಗೆ ಉಪಕಾರ ಸಿಗಲಿ" ಎನ್ನುವ ಆಶಯದೊಂದಿಗೆ ದೇರಳಕಟ್ಟೆ ಕೆ. ಎಸ್ ಹೆಗ್ಡೆ ಆಸ್ಪತ್ರೆಗೆ ಶರೀರ ದಾನದ ಕರಾರು ಬರೆದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News